ಕೋಲಾರ : ಕೋಲಾರದಲ್ಲಿ ವೈದ್ಯರ ನಿರ್ಲಕ್ಷದಿಂದ ರೋಗಿ ಸಾವನ್ನಪ್ಪಿದ್ದು, ಈ ವೇಳೆ ಮೃತನ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಹೀಗಾಗಿ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವೈದ್ಯರು ಮೃತ ಸಂಬಂಧಿಕರ ವಿರುದ್ಧ ದೂರು ದಾಖಲಿಸುತ್ತಾರೆ ಅಲ್ಲದೆ, ರೋಗಿಯ ಸಾವಿಗೆ ವೈದರೆ ಕಾರಣ ಎಂದು ಆರೋಪಿಸಿ ಮೃತನ ಸಂಬಂಧಿಕರು ವೈದ್ಯರ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದಾರೆ.
BREAKING : ಹಾವೇರಿ : ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೊಲೆರೋ ವಾಹನ ಡಿಕ್ಕಿ : ಮೂವರ ಸಾವು, ಹಲವರಿಗೆ ಗಾಯ
ಮೃತ ವ್ಯಕ್ತಿ ಹೊಟ್ಟೆ ನೋವು ಅಂತ ಹೋಪ್ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ಶ್ರೀನಿವಾಸಪುರದ ಕಮ್ಮತಮ್ಮಪಲ್ಲಿಯ ವೆಂಕಟರಮಣಪ್ಪ (32) ಎನ್ನುವ ವ್ಯಕ್ತಿಯ ಸಾವನ್ನಪ್ಪಿದ್ದು,ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ವೆಂಕಟರಮಣಪ್ಪ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
BREAKING: ಚಿತ್ರದುರ್ಗದಲ್ಲಿ ‘ನೈತಿಕ ಪೊಲೀಸಗಿರಿ’ : ಮುಸ್ಲಿಂ ಮಹಿಳೆಯ ಜೊತೆ ಅನೈತಿಕ ಸಂಬಂಧ ಆರೋಪಿಸಿ ಹಲ್ಲೆ
ವೈದ್ಯರು ನೀಡಿದ ಇಂಜೆಕ್ಷನ್ ಇಂದಲೇ ಮೃತಪಟ್ಟಿದ್ದಾರೆಂದು ಆರೋಪಿಸಲಾಗುತ್ತಿದೆ.ಆಸ್ಪತ್ರೆಯ ವೈದ್ಯರ ಮೇಲೆ ಸಂಬಂಧಿಕರು ಹಲ್ಲೆಗೆ ಮುಂದಾಗಿದ್ದಾರೆ. ಹೋಪ್ ಆಸ್ಪತ್ರೆ ವೈದ್ಯ ಡಾಕ್ಟರ್ ಯಶವಂತರಿಂದ ನಾಗರ ಠಾಣಿಗೆ ದೂರು ಸಲ್ಲಿಸಲಾಗಿದ್ದು ವೈದ್ಯರ ನಿರ್ಲಕ್ಷ ಆರೋಪ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಂದಲೂ ಕೂಡ ದೂರು ದಾಖಲಾಗಿದೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ