*ಅವಿನಾಶ್ ಭೀಮಸಂದ್ರ ಜೊತೆಗೆ ಲೀಲಾ ವಸಂತ್
ಬೆಂಗಳೂರು : ನಾಳೆಯೇ ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟವಾಗಲಿದೆ ಎನ್ನುವ ಪ್ರತಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಇದೇ ವೇಳೆ ವೈರಲ್ ಆಗಿರೋ ಪತ್ರಕ್ಕೆ ಸಂಬಂಧ ಪಟ್ಟಂತೆ ನಿಮ್ಮ ಕನ್ನಡ ನ್ಯೂಸ್ ನೌ ದ್ವಿತೀಯ ಪಿಯುಸಿ ಆಯುಕ್ತರನ್ನು ಸಂಪರ್ಕ ಮಾಡಿದ ವೇಳೆಯಲ್ಲಿ ಇದೊಂದು ನಕಲಿ ಸುತ್ತೋಲೆ ಅಂತ ಹೇಳಿದ್ದಾರೆ. ಈ ಮೂಲಕ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ರಿಸಲ್ಟ್ ಬಗ್ಗೆ ಅಧಿಕ ಆದೇಶ ಹೊರ ಬಿದ್ದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ವಿದ್ಯಾರ್ಥಿಗಳು ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಇರಬೇಕು ಎನ್ನುವುದು ಕನ್ನಡ ನ್ಯೂಸ್ ನೌ ನ ಆಶಯವಾಗಿದೆ. ನಾವೂ ಕೂಡ ಅಧಿಕೃತ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳು ನೀಡಿದ ಬಳಿಕ ಮಾತ್ರ ಅದನ್ನು ಓದುಗರಿಗೆ ನೀಡುತ್ತೇವೆ ಹೊರತು, ಆತುರದಲ್ಲಿ ಸುದ್ದಿ ಮಾಡೋದು ಇಲ್ಲ
ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ದ್ವಿತೀಯ ಪಿಯುಸಿ ರಿಸಲ್ಟ್ ಇನ್ನೂ ಹತ್ತಿರಿಂದ 15 ದಿವಸದಲ್ಲಿ ಬರುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ, ಅದ್ಯಾಗು ಕೂಡ ಆಯುಕ್ತರೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ.
ನಕಲಿ ಸುತ್ತೋಲೆಯಲ್ಲಿ ಇರೋದು ಏನು?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಮಲ್ಲೇಶ್ವರಂ, ಬೆಂಗಳೂರು 11 Cod:/4/2024
ಪತ್ರಿಕಾ ಪ್ರಕಟಣೆ
ಮಾರ್ಚ್ 20230 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ:11/03/2014 ರಿಂದ 21/03/2024ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯವಾದನ ಕಾರ್ಯವು ಮುಕ್ತಾಯವಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ: (M11/2121 ರಂದು ಬೆಳಿಗ್ಗೆ 11:00 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಟಿಯನ್ನು ಕರೆಯಲಾಗಿದೆ. ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ DO 03/04/20248 ವೀಕ್ಷಿಸಬಹುದಾಗಿದೆ.