ಚಿತ್ರದುರ್ಗ : ಮುಸ್ಲಿಂ ಮಹಿಳೆಯ ಜೊತೆ ಅನೈತಿಕ ಸಂಬಂಧ ಆರೋಪಿಸಿ ಮಹಿಳೆಯ ಸಂಬಂಧಿಕರು ಸಾಮಾಜಿಕ ಕಾರ್ಯಕರ್ತ ಬಿ ಹೆಚ್ ಗೌಡ ಎನ್ನುವವರ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ.
ಹೌದು ಮುಸ್ಲಿಂ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಬಿಎಚ್ ಗೌಡ ಎನ್ನುವ ವ್ಯಕ್ತಿಯ ಮೇಲೆ ಮುಸ್ಲಿಂ ವಿವಾಹಕರು ಅನೈತಿಕ ಪೊಲೀಸ್ ಗೆರೆ ನಡೆಸಿ ಹಲ್ಲೆ ನಡೆದಿರುವ ಘಟನೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿ ನಡೆದಿದೆ.
ಬಿಹೆಚ್ ಗೌಡ ಮೇಲೆ ಹಲ್ಲೆ ನಡೆಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಮಹಿಳೆ ಸಂಬಂಧಿಕರಿಂದ ಸಾಮಾಜಿಕ ಕಾರ್ಯಕರ್ತ ಬಿ ಎಚ್ ಗೌಡ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಂದಿದೆ. ಇದೀಗ ಚಿತ್ರದುರ್ಗ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.