ಉಡುಪಿ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇತ್ತೀಚಿಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಸಭೆ ನಡೆಸಿದಾಗ ಸಭೆಯಲ್ಲಿ ಮಕ್ಕಳನ್ನು ಬಳಸಿದರಿಂದ ಇದೀಗ ಬೈಂದೂರು ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕೆ ಪ್ರಕರಣ ದಾಖಲಾಗಿದೆ.
ಭಾರತದ ಪ್ರಯಾಣಿಕರ ವಾಹನ ವಿಭಾಗವು 10% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ: ವರದಿ
ನಂದನವನ ಗ್ರಾಮದ ಪರಿಚಯ ಹೋಟೆಲ್ನ ದೇವಕಿ ಸಭಾಂಗಣದಲ್ಲಿ ಮಾ.31ರಂದು ನಡೆದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಕ್ಕಳನ್ನು ಬಳಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎಸ್.ಈಶ್ವರಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ 2000 ಮಂದಿ ಸೇರಿದ್ದು ಇದರ ವಿಡಿಯೋ ಚಿತ್ರೀಕರಣ ವಿಎಸ್ಟಿ ತಂಡ ನಡೆಸಿತ್ತು. ಬಳಿಕ ವಿಡಿಯೋವನ್ನು ಕುಂದಾಪುರ ಕಾರ್ಮಿಕ ನಿರೀಕ್ಷಕರು ಪರಿಶೀಲಿಸಿದಾಗ ಸಭೆಯಲ್ಲಿ ಸೇರಿದ್ದ ಜನರಲ್ಲಿ ಸುಮಾರು 25ರಿಂದ 30 ಮಂದಿ 14 ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 15ಕ್ಕೂ ಹೆಚ್ಚು ಅಪ್ರಾಪ್ತರು ಭಾಗವಹಿಸಿರುವುದು ಕಂಡು ಬಂದಿದೆ.
ಹೊಸ ಮನೆ ಕನಸು ಕಂಡವರಿಗೆ ಬಿಗ್ ಶಾಕ್ : ದೇಶಾದ್ಯಂತ ‘ಸಿಮೆಂಟ್’ ಬೆಲೆ ಪ್ರತಿ ಚೀಲಕ್ಕೆ 10-15 ರೂಪಾಯಿ ಹೆಚ್ಚಳ
ವಿಡಿಯೋದಲ್ಲಿ 14 ವಯಸ್ಸಿಗಿಂತ ಕಡಿಮೆ ವಯಸ್ಸಿನ ಹುಡುಗರು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಅವರ ಶಾಲು ಧರಿಸಿದ್ದು, ಈ ಮೂಲಕ ಸಭೆಗೆ ಅನುಮತಿ ಪತ್ರ ಪಡೆದ ಮಣಿಕಂಠ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಕರೆತಂದು ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ ಎಂದು ಫೈಯಿಂಗ್ ಸ್ಕಾಡ್ನ ಅಧಿಕಾರಿ ಚಂದ್ರಶೇಖರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.