ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಮೈಸೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದು ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್ ಡಿ ದೇವೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜೆಡಿಎಸ್ ಪಕ್ಷ ಕಟ್ಟಿದ್ದೆ ನಾನು. ಆದರೆ ದೇವೇಗೌಡರು ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿ ಹೊರಗೆ ಕಳುಹಿಸಿದರು ಎಂದು ಗಂಭೀರವಾದ ಆರೋಪ ಮಾಡಿದರು.
ರಾಜ್ಯದ ಈ ಪ್ರಸಿದ್ದ ಕ್ಷೇತ್ರದಲ್ಲಿ ದೇವರ ಮೀನುಗಳಿಗೆ ಆಹಾರ ಹಾಕುವುದು ನಿಷೇಧ !
2009 ರಲ್ಲಿ ರಾಮಕೃಷ್ಣ ಹೆಗಡೆ, ಎಸ್.ಬೊಮ್ಮಾಯಿ ಸೇರಿದಂತೆ ಅನೇಕರು ಜನತಾದಳ ಬಿಟ್ಟು ಹೋದರು. ಆಗ ನಾನು ದೇವೇಗೌಡರ ಬಳಿ ಹೋಗಿ ಜೆಡಿಎಸ್ ಮಾಡೋಣ ಎಂದು ಹೇಳಿದೆ. ನಂತರ ಜೆಡಿಎಸ್ ಹುಟ್ಟಿಕೊಂಡಿತು. ನಾನು ಜೆಡಿಎಸ್ ಸಂಸ್ಥಾಪಕ ಅಧ್ಯಕ್ಷನಾಗಿದ್ದೇ. ನಂತರ ನನ್ನನ್ನು ಪಕ್ಷದಿಂದ ದೇವೇಗೌಡರು ಉಚ್ಛಾಟನೆ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ಮೈಸೂರಿನಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 2009ರಲ್ಲಿ ಜನತಾದಳ ವಿಭಜಯನೆಯಾತು. ಬೈರೇಗೌಡರು, ಬೊಮ್ಮಾಯಿ ಎಲ್ಲಾ ಜೆ.ಎಚ್.ಪಟೇಲ್ ಜೊತೆ ಹೊದ್ರು. ನಾವು ಹೋಗಲಿಲ್ಲ. ನಾನು ದೇವೇಗೌಡರು ಎಲ್ಲಾ ಸೇರಿ ಜೆಡಿಎಸ್ ಮಾಡಿದ್ವಿ. ನಾನು ಜೆಡಿಎಸ್ ನ ಫೌಂಡರ್ ಪ್ರೆಸೆಡಿಂಟ್. ದೇವೇಗೌಡರು ರಾಷ್ಟೀಯ ಅಧ್ಯಕ್ಷರಾಗಿದ್ದರು. ನಾನು ಆರು ವರ್ಷ ಪಕ್ಷ ಕಟ್ಟಿದ್ದೇನೆ. ಆದ್ರೆ, ಜೆಡಿಎಸ್ ಪಕ್ಷದಿಂದ ನನ್ನನ್ನೆ ತೆಗೆದ್ರು ಎಂದು ಜೆಡಿಎಸ್ ವಿರುದ್ಧ ಕಿಡಿಕಾರಿದರು.
ಒಬ್ಬರು ‘ಸಿಎಂ’ ಕುರ್ಚಿಗಾಗಿ ಹೋರಾಡುತ್ತಿದ್ದರೆ, ಇನ್ನೊಬ್ಬರು ಕಿತ್ತುಕೊಳ್ಳಲು ಹೋರಾಡುತ್ತಿದ್ದಾರೆ : ಅಮಿತ್ ಶಾ
ಬಿಜೆಪಿಯವರು ಜೆಡಿಎಸ್ ಜೊತೆ ಶಾಮಿಲ್ ಆಗಿದ್ದಾರೆ. 2018ರಲ್ಲಿ ಸಮಿಶ್ರ ಸರ್ಕಾರ ಜಾರಿಗೆ ಬಂತು. ಕುಮಾರಸ್ವಾಮಿ ಸಿಎಂ ಆಗಿದ್ದರು. ಬಿಜೆಪಿಗೆ ಹೋಗಬಾರದು ಅಂತ ಅವರನ್ನೇ ಸಿಎಂ ಮಾಡಲಾಗಿತ್ತು. ದೇವೇಗೌಡರು ಸಹ ಒಪ್ಪಿಕೊಂಡು ಬಿಜೆಪಿ ಜೊತೆ ಹೋಗಲ್ಲ ಅಂದ್ರು. ಒಂದು ವರ್ಷ ಎರಡು ತಿಂಗಳು ಚೆನ್ನಾಗಿತ್ತು. ಸಮಿಶ್ರ ಸರ್ಕಾರ ತೆಗೆದಿದ್ದು ಮಿಸ್ಟರ್ ಯಡಿಯೂರಪ್ಪ. ಈಗ ಅವರ ಜೊತೆಯೇ ಬಾಯಿ ಬಾಯಿ ಎಂದು ಹೋಗಿದ್ದಾರೆ ಎಂದು ಕಿಡಿ ಕಾರಿದರು.
ದೇವೇಗೌಡರ ಕುಟುಂಬದವರು ಯಾರು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲ್ಲ. ಡಾ. ಮಂಜುನಾಥ್, ಪ್ರಜ್ವಲ್, ಎಚ್ಡಿ ಕುಮಾರಸ್ವಾಮಿ ಎಲ್ಲರೂ ಸೋಲುತ್ತಾರೆ. ಕುಮಾರಸ್ವಾಮಿ, ದೇವೇಗೌಡರು ಬಂದು ಕಣ್ಣೀರು ಹಾಕಬಹುದು. ಅದಕ್ಕೆ ಕರಗಬೇಡಿ. ಮರುಗಬೇಡಿ ಎಂದು ಜನರಿಗೆ ಕಿವಿ ಮಾತು ಹೇಳಿದರು.
ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ 30 ನಿಮಿಷಗಳ ಕಾಲ ನಿಂತ ಕಾಡಾನೆ:ಸಂಚಾರ ಅಸ್ತವ್ಯಸ್ತ | Watch Video