ಬೆಂಗಳೂರು : ಕರ್ನಾಟಕ ರಾಜ್ಯದ ಜನರಿ ಹಿತಕ್ಕಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿಯ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದರು.5 ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರಗಳ ಪ್ರಮುಖ ಸಮಾವೇಶ ನಡೆಯುತ್ತಿದ್ದು ಈ ಸಮಾವೇಶದಲ್ಲಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಪ್ರತಿ ತಿಂಗಳು 43.3 ಕೋಟಿ ಡಿಜಿಟಲ್ ವಹಿವಾಟು: ನಿರ್ಮಲಾ ಸೀತಾರಾಮನ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಂತಹ 5 ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರಗಳ ಪ್ರಮುಖ ಸಮಾವೇಶದಲ್ಲಿ ಮಾತನಾಡಿದ ಅವರು, ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಮತ್ತೊಬ್ರು ಕುರ್ಚಿ ಕಿತ್ತುಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್ಥಿಕ ಬಿಕ್ಕಟ್ಟು : ಫೋನ್ ಕರೆಗಳ ಮೂಲಕ ಉದ್ಯೋಗಿಗಳ ವಜಾಗೊಳಿಸುತ್ತಿರುವ ‘ಬೈಜುಸ್’
ಡಾಕ್ಟರ್ ಮನ ಮೋಹನ್ ಸಿಂಗ್ ಸರ್ಕಾರ 1.42 ಲಕ್ಷ ಕೋಟಿ ಅನುದಾನ ನೀಡಿದರೆ, ಮೋದಿ ಸರಕಾರ ರಾಜ್ಯ ಸರ್ಕಾರಕ್ಕೆ 4. 91 ಲಕ್ಷ ಕೋಟಿ ಅನುದಾನ ಕೊಟ್ಟಿದೆ. ಕೆಲವು ಕ್ರಿಮಿನಲ್ ಕಾನೂನು ಸೆಕ್ಷನ್ ಗಳನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಬಂಡಾಯ ಶಮನ ಮಾಡಲು ಅಮಿತ್ ಷಾ ಯತ್ನ : ನಾಳೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ದಿಲ್ಲಿಗೆ
12 ಲಕ್ಷ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಬೇಕು ಬೇಡ್ವಾ? ಅಂತವರನ್ನು ಜೈಲಿಗೆ ಕಳುಹಿಸಿದೆಮಾಲಿನಲ್ಲಿ ಮಹಲಿನಲ್ಲಿ ಇಡಬೇಕಾ? ಬೆಂಗಳೂರು ಅರಮನೆ ಮೈದಾನದಲ್ಲಿ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.