ಡಮಾಸ್ಕಸ್ : ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಕಟ್ಟಡದ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಡಮಾಸ್ಕಸ್ನ ಮಝೆಹ್ ನೆರೆಹೊರೆಯಲ್ಲಿರುವ ಇರಾನಿನ ದೂತಾವಾಸ ಕಟ್ಟಡವನ್ನ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ತಿಳಿಸಿದೆ.
ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಸಿರಿಯಾ ರಕ್ಷಣಾ ಸಚಿವಾಲಯ ತಿಳಿಸಿದೆ.
ಸ್ಥಳೀಯ ಇರಾನಿನ ವರದಿಗಳ ಪ್ರಕಾರ, ಡಮಾಸ್ಕಸ್ನಲ್ಲಿ ಇಸ್ರೇಲಿ ದಾಳಿಯು ಅನೆಕ್ಸ್ ಕಟ್ಟಡವನ್ನ ಸಂಪೂರ್ಣವಾಗಿ ನಾಶಪಡಿಸಿತು. ರಾಯಭಾರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಅದು ಹೇಳಿದೆ.
ಮೇ 2023ರಿಂದ 2000 ರೂ.ಗಳ ನೋಟುಗಳಲ್ಲಿ 97.69% ಮರಳಿದೆ, ಇನ್ನೂ 8,202 ಕೋಟಿ ರೂಪಾಯಿ ಮರಳಬೇಕಿದೆ : RBI
BREAKING : ಕೋವಿಡ್ ಹಗರಣ : ಡಾ.ಕೆ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
Viral Video : ಭಾರತ ದಾಖಲೆಯ ರಕ್ಷಣಾ ರಫ್ತು ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ‘ರಾಹುಲ್ ಗಾಂಧಿ’ಗೆ ಟ್ರೋಲ್