ಮೈಸೂರು : ಬಿಜೆಪಿ ವಿರುದ್ಧ ಯಾರೇ ಮಾತನಾಡಿದರು ಅಂಥವರ ವಿರುದ್ಧ ಇಡೀ ಹಾಗೂ ಐಟಿ ಇಲಾಖೆಗಳನ್ನು ಛೂ ಬಿಡುತ್ತಾರೆ. ಛೂ ಬಿಟ್ಟು ನಮ್ಮನ್ನು ಹೆದರಿಸುತ್ತಾರೆ ನಿಮ್ಮನ್ನು ಹೆದರಿಸೋಕೆ ಆಗುತ್ತಾ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹೊಳಲ್ಕೆರೆ ಶಾಸಕ ಚಂದ್ರಪ್ಪ ಮನವೊಲಿಸಲು ‘BSY’ ಯಶಸ್ವಿ : ಪಕ್ಷೇತರ ಸ್ಪರ್ಧೆ ವಿಚಾರ ಕೈಬಿಟ್ಟ ರಘುಚಂದನ್
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕಾಗಿ ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಹಮ್ಮಿಕೊಂಡಿದ್ದ, ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದರು.
ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಕಂಡರೆ ಭಯಪಡುವವರನ್ನು ಆಯ್ಕೆ ಮಾಡಬೇಕಾ? ಜನರ ಬಗ್ಗೆ ಮಾತನಾಡುವವರನ್ನು ಆಯ್ಕೆ ಮಾಡಬೇಕಾ? ನೀವೇ ತೀರ್ಮಾನಿಸಿ. ಅವರ ಕೊಟ್ಟ ಮಾತು ಮರೆಯುತ್ತಾರೆ ನಾವು ಕೊಟ್ಟ ಮಾತು ಈಡೇರಿಸುತ್ತೇವೆ ಎಂದರು.
ಹೆಸರು ಪ್ರಧಾನ ಮಂತ್ರಿ ಆವಾಸ್ ಯೋಜನೆ: ಕೇಂದ್ರ ಕೊಡೋದು ಮಾತ್ರ ಬರೀ 12 ಸಾವಿರ ರೂಪಾಯಿ : ಸಿಎಂ ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಗಿ 18,000 ಕೋಟಿಯನ್ನು ಕೇಳಿದ್ದೆವು.ಇವರಿಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ ಸುಪ್ರೀಂ ನಲ್ಲಿ ಕೇಸ್ ಹಾಕಿದ್ದೇವೆ. ಹಾಗಾಗಿ ಈ ಬಾರಿ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.