ಮಂಡ್ಯ : ಡಿಕೆ ಶಿವಕುಮಾರ್ ಅವರು ಇಂದು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಸರಿ ಶಾಲಾ ಹಾಕಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಸಿದ್ದಾಂತವನ್ನುನೀರಿನಲ್ಲಿ ತೊಳೆದುಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆಗೆ ಇದೀಗ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು ಸಿದ್ಧಾಂತ ಎನ್ನುವುದು ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಇದೆ ಕೇಸರಿ ಶಾಲು ಹಾಕಿಕೊಳ್ಳುವುದರಲ್ಲಿಲ್ಲ ಎಂದು ಹೇಳಿದರು.
BREAKING: ಏ.15 ರಿಂದ ದೇಶದಲ್ಲಿ USSD ಆಧಾರಿತ ‘ಕರೆ ಫಾರ್ವರ್ಡಿಂಗ್’ ಸೇವೆಗಳು ಸ್ಥಗಿತ
ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು. ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ವಿಶ್ವಾಸವಿಡಿ ಎಂದು ಮಂಡ್ಯ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.ಜೆಡಿಎಸ್ ಪಕ್ಷ ಮುಗಿದೆ ಹೋಯಿತು ಎಂದು ಕೆಲವರು ಹೇಳುತ್ತಾರೆ ನಮ್ಮ ಕಾರ್ಯಕರ್ತರು ನಮಗೆ ಯಾರು ಅನ್ಯಾಯ ಮಾಡಿಲ್ಲ ಎಂದು ತಿಳಿಸಿದರು.
ಎಚ್ಚರ, ಬೇಸಿಗೆಯಲ್ಲಿ ‘ಸ್ಮಾರ್ಟ್ ಫೋನ್’ ಸ್ಫೋಟಗೊಳ್ಳುವ ಅಪಾಯ ಹೆಚ್ಚು! ಈ ‘ತಪ್ಪು’ಗಳನ್ನ ಮಾಡ್ಬೇಡಿ
ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಗೆಲ್ಲಬೇಕಿತ್ತು. ನಮ್ಮ ಸ್ವಯಂಕೃತ ಅಪರಾಧಗಳಿಂದ ಸೋತಿದ್ದೇವೆ. ನಮ್ಮ ಕನಕಪುರ ಸ್ನೇಹಿತ ನನಗೆ ಅಮೃತ ಕೊಟ್ಟಿದ್ದೇನೆ ಎಂದು ಹೇಳುತ್ತಾನೆ ಯಾವ ಅಮೃತ ಕೊಟ್ಟಿದ್ದಾನೋ ಗೊತ್ತಿಲ್ಲ. ಮಂಡ್ಯಗೆ ಬಂದು ಏನೋ ಹೇಳಿದ್ದಾನೆ ಏನ್ ಹೇಳುತ್ತಾರೋ ಹೇಳಲಿ ಜನರು ಉತ್ತರ ಕೊಡುತ್ತಾರೆ.ಪೇಪರ್ ಪೆನ್ನು ಕೇಳಿದ್ದ ಜನ ಕೊಟ್ಟಿದ್ದಾರೆ ಈಗ ಏನು ಮಾಡ್ತಿದ್ದೀಯಾ ಮೇಕೆದಾಟು ಯೋಜನೆ ಏನು ಆಯ್ತು? ಬಿಜೆಪಿ ಕಡೆ ಬೊಟ್ಟು ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.