ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ, ಕಳೆದ ಚುನಾವಣೆಯಲ್ಲಿ ನನಗೆ 48 ಗೆಲ್ಲಿಸಿದ್ದೀರಿ ಸಿಎಂ ಸ್ಥಾನದಲ್ಲಿ ನಾನು ಇರಬೇಕಾ ಬೇಡ್ವಾ? ಹಾಗಿದ್ದರೆ ಅರವತ್ತು ಸಾವಿರ ಲೀಡ್ ನಿಂದ ನನ್ನನ್ನು ಗೆಲ್ಲಿಸಿ. ಈ ಬಾರಿ 60,000 ಲೀಡಿನಿಂದ ಗೆಲ್ಲಿಸಿ ಕೊಟ್ಟರೆ ನನ್ನನ್ನು ಯಾರಿಗೂ ಮುಟ್ಟೋಕೆ ಆಗಲ್ಲ ಎಂದು ತಿಳಿಸಿದರು.
ವರುಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಶಾಕಿಂಗ್ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ನಾನು ಇರಬೇಕಾ ಬೇಡವಾ ಹೇಳಿ. ನಾನು ಇರಬೇಕು ಅಂದರೆ ಅರವತ್ತು ಸಾವಿರ ಲೀಡ್ ಕೊಡಿ. ವರುಣ ಕ್ಷೇತ್ರದಲ್ಲಿ 60,000 ಲೀಡ್ ಕೊಡಬೇಕು ವರುಣದಲ್ಲಿ ಲೀಡ್ ಕೊಟ್ಟರೆ ನನ್ನ ಯಾರು ಮುಟ್ಟುವುದಿಲ್ಲ ಎಂದು ಅವರು ತಿಳಿಸಿದರು.
ನನಗೆ ವಿಧಾನಸಭೆ ಚುನಾವಣೆಯಲ್ಲಿ 48,000 ಲೀಡ್ನಲ್ಲಿ ಕೊಟ್ಟು ಗೆಲ್ಲಿಸಿದ್ದೀರಾ ಈಗ ಅದಕ್ಕಿಂತ ಜಾಸ್ತಿ ಕೊಟ್ಟು ಗೆಲ್ಲಿಸಬೇಕಾ? ಅಷ್ಟೇ ಕೊಡಬೇಕಾ ಕನಿಷ್ಠಪಕ್ಷ ಅರವತ್ತು ಸಾವಿರ ಲೀಡ್ನಲ್ಲಿ ಗೆಲ್ಲಬೇಕು. ನಾನು ಮಹದೇವಪ್ಪ, ಯತೀಂದ್ರ ಎಲ್ಲರೂ ನಿಮಗೆ ಪರಿಚಯ. ನಾವೆಲ್ಲ ಇರುವಾಗ ಎಲ್ಲ ಇರುವಾಗ ಅರವತ್ತು ಸಾವಿರ ಲೀಡ್ ಬರಲೇಬೇಕು. 60 ಸಾವಿರ ಲೀಡ್ ನಿಂದ ಗೆಲ್ಲಿಸಿ ಕೊಟ್ಟರೆ ನನಗೆ ಸಂತೋಷ ಆಗುತ್ತದೆ ನನ್ನನ್ನ ಯಾರು ಮುಟ್ಟಕ್ಕಾಗಲ್ಲ ಎಂದು ತಿಳಿಸಿದರು.