ಮಂಡ್ಯ : ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರ ಹಿನ್ನೆಲೆಯಲ್ಲಿ, ಮಂಡ್ಯದಲ್ಲಿ ಎಚ್‍ಡಿ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದು ಮೈತ್ರಿ ಮಾಡಿಕೊಂಡು ಸಿದ್ಧಾಂತದಲ್ಲಿ ಸತ್ತ ಹಾಗೆ ಎಂದು ವಾಗ್ದಾಳಿ ನಡೆಸಿದರು.
ದೂರಗಾಮಿ ‘ಬ್ರಹ್ಮೋಸ್ ಕ್ಷಿಪಣಿ’ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಭಾರತ
ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ದಳಪತಿಗಳ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಎಚ್ಡಿಕೆ ಮತ್ತು ಎಚ್ ಡಿ ದೇವೇಗೌಡ ಕೆಸರಿ ಬಾವುಟ ಹಾಕಿದ್ದಾರೆ.ಜಾತ್ಯಾತೀತ ತತ್ವವನ್ನ ನೀರಿಗೆ ಹಾಕಿ ತೊಳೆದುಬಿಟ್ಟಿದ್ದಾರೆ.ಮಂಡ್ಯದ ರಾಜಕೀಯ ನೋಡಿದರೆ ನಾಚಿಕೆ ಅನ್ನಿಸುತ್ತಿದೆ.ಪುಟ್ಟರಾಜು ಟಿಕೆಟ್ ಸಿಗುತ್ತೆ ಅಂತ ಕಾಕಾ ಹೊಡೆತಿದ್ದ ಸಿ ಎಸ್ ಪುಟ್ಟರಾಜು ಕಥೆ ಗೋವಿಂದ ಅಂತ ಡಿಕೆ ಶಿವಕುಮಾರ್ ವ್ಯಂಗ್ಯ ವಾಡಿದ್ದಾರೆ.
ಮಂಡ್ಯದಲ್ಲಿ ಕೈ ನಾಯಕರ ಶಕ್ತಿ ಪ್ರದರ್ಶನ : ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಸ್ವಾರ್ ಚಂದ್ರು
ಮಂಡ್ಯ ಜನರು ಸ್ವಾಭಿಮಾನಕ್ಕೆ ಗೌರವ ಕೊಟ್ಟಿದ್ದಾರೆ.ಮಂಡ್ಯ ಪಾರುಪತ್ಯವನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ ಇದು ಟೂರಿಂಗ್ ಟಾಕೀಸ್, ಸಿನಿಮಾ ರಾಜಕಾರಣ ಅಲ್ಲ ಇದು ಬದುಕಿನ ರಾಜಕಾರಣ. ಮಂಡ್ಯದಲ್ಲಿ ಒಂದಲ್ಲ ಎರಡು ಲಕ್ಷ ಲೀಡ್ ನಲ್ಲಿ ಗೆಲ್ಲುತ್ತೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.