ಮಂಡ್ಯ : ಮಂಡ್ಯ ಜಿಲ್ಲೆಯಿಂದ ನಮಗೆ ಅಧಿಕ ಸೀಟ್ ಕೊಟ್ಟಿದ್ದೀರಿ ನಿಮ್ಮ ನಂಬಿಕೆಯನ್ನು ಹೊಸಿಗೊಳಿಸಿಲ್ಲ ಹಾಗಾಗಿ ಈ ಬಾರಿ ಎಂಟು ಮಂದಿ ವಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಾನು ಸದಾ ಮಂಡ್ಯದ ಸ್ವಾಭಿಮಾನದ ಜೊತೆಗೆ ಇರುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಮಹಿಳೆಗೆ ನಿಂದನೆ: ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿರುದ್ಧ ಕೇಸ್ ದಾಖಲು!
ನಾನು ಮಂಡ್ಯ ಸ್ವಾಭಿಮಾನದ ಜೊತೆಗೆ ಇರುತ್ತೇನೆ ಎಂದು ಮಂಡ್ಯದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಸ್ಥಳೀಯರನ್ನು ಆಯ್ಕೆ ಮಾಡಿ ಮಂಡ್ಯದ ಗೌಡಿಕೆಯನ್ನು ಬೇರೆಯವರಿಗೆ ಕೊಟ್ಟಿಲ್ಲ. ಕಳೆದ ಬಾರಿ ಮೈತ್ರಿಯಂತೆ ಎಚ್ ಡಿ ಕುಮಾರಸ್ವಾಮಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಎಚ್ ಡಿ ಕುಮಾರಸ್ವಾಮಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ ತಮ್ಮ ಅಧಿಕಾರ ತೆಗೆದವರ ಜೊತೆ ಎಚ್ ಡಿ ಕುಮಾರಸ್ವಾಮಿ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರಿ ನೌಕರರ ವಿಚಾರಣೆಗೆ ಹೊಣೆ ವಹಿಸುವಂತೆ ನಿರ್ದೇಶನ ನೀಡುವ ಅಧಿಕಾರ ಲೋಕಾಯುಕ್ತಕ್ಕಿಲ್ಲ : ಹೈಕೋರ್ಟ್
ಈ ಬಾರಿ ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದೇವೆ.ನನ್ನ ನೋಡಿ ಮಂಡ್ಯ ಜಿಲ್ಲೆಯಲ್ಲಿ ಅಧಿಕ ಸೀಟ್ ಕೊಟ್ಟಿದ್ದೀರಿ.ನಿಮ್ಮ ನಂಬಿಕೆಯನ್ನು ಹೊಸಿಗೊಳಿಸಿಲ್ಲ. ಎಚ್ ಡಿ ಕುಮಾರಸ್ವಾಮಿ ಹಾಸನದಿಂದ ರಾಮನಗರಕ್ಕೆ ಬಂದಿದ್ದರು.ಇದೀಗ ಕುಮಾರಸ್ವಾಮಿ ಮಂಡ್ಯಗೆ ಬಂದಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಭಾವನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ.ಎಲ್ಲಾ ಕಡೆ ನೀವೇ ನಿಂತರೆ ಕಾರ್ಯಕರ್ತರು ಏನು ಮಾಡಬೇಕು? ಎಂದು ಮಂಡ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.