ಬೆಂಗಳೂರು : ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ವಿಪರೀತ ಸೆಕೆ, ಬಿಸಿ ಗಾಳಿಗೆ ಜನರು ಹೈರಾಣಾಗಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುಮಾಡುತ್ತದೆ. ಬಿಸಿಲ ಶಾಖದಿಂದ ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.
`ಸಖತ್ ಸೆಕೆ’ ಇರಲಿ ಸುರಕ್ಷತೆ
ತೆಳವಾಗಿರುವ ಬಟ್ಟೆ ಧರಿಸಿ
ಮದ್ಯಪಾನ ಮಾಡದಿರಿ
ಹೆಚ್ಚು ನೀರು ಕುಡಿಯಿರಿ
ಹೊರಗೆ ಕಡಿಮೆ ಓಡಾಡಿ
ಆರೋಗ್ಯಕರ ಆಹಾರ ಸೇವಿಸಿ
ಶಾಖಾಘಾತದ ಲಕ್ಷಣಗಳು
ಕೆಂಪಾಗುವುದು ಮತ್ತು ಚರ್ಮ ಬಿಸಿಯಾಗುವುದು
ವಾಕರಿಕೆ ಮತ್ತು ವಾಂತಿ
ತಲೆ ಸುತ್ತುವಿಕೆ
ಬಲಹೀನತೆ