ಉಡುಪಿ : ಕ್ಷುಲ್ಲಕ ಕಾರಣಕ್ಕಾಗಿ ಸಹೋದರರ ಇಬ್ಬರ ನಡುವೆ ಗಲಾಟೆ ನಡೆದಿದ್ದು ಗಲಾಟೆಯು ವಿಕೋಪಕ್ಕೆ ತಿರುಗಿ, ತಮ್ಮ ತನ್ನ ಅಣ್ಣನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ನಾಲ್ಕೂರು ಗ್ರಾಮದ ಕಜ್ಜೆ ಅರಮನೆ ಜೆಡ್ಡು ಎಂಬಲ್ಲಿ ನಡೆದಿದೆ.
ಏ.4ಕ್ಕೆ ನಿಶ್ಚಿತಾರ್ಥ, 26ಕ್ಕೆ ಮದುವೆ: ‘BJP-JDS ಮೈತ್ರಿ’ ಬಗ್ಗೆ ‘MLA ಸಮೃದ್ಧಿ ಮಂಜುನಾಥ್’ ಬಣ್ಣನೆ
ಮೃತರನ್ನು ನಾಲ್ಕೂರು ಗ್ರಾಮದ ಕಜ್ಜೆ ಅರಮನೆಜೆಡ್ಡು ನಿವಾಸಿ ಗುಲಾಬಿ ಎಂಬವರ ಮಗ ಮಂಜುನಾಥ (35) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಮೃತರ ತಮ್ಮ ವಿಶ್ವನಾಥ್ (30) ಎಂದು ಹೇಳಲಾಗುತ್ತಿದ್ದು ಇದೀಗ ಅಣ್ಣನನ್ನು ಹತ್ಯೆ ಮಾಡಿರುವಂತಹ ಆರೋಪಿ ವಿಶ್ವನಾಥ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಜಿ ಸಿಎಂ HDK ಪರಮಾಪ್ತ ‘ಕೆ.ಪಿ ಬಚ್ಚೇಗೌಡ ಜೆಡಿಎಸ್’ಗೆ ಗುಡ್ ಬೈ: ಕಾಂಗ್ರೆಸ್ ಸೇರ್ಪಡೆ
ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ ಒಂದೇ ಮನೆಯಲ್ಲಿ ವಾಸವಾಗಿದ್ದು, ಆಗಾಗ ಗಲಾಟೆ ಮಾಡುತ್ತಿದ್ದರು. ಮಧ್ಯರಾತ್ರಿ ವೇಳೆ ಮಂಜುನಾಥ, ತನ್ನ ತಮ್ಮ ವಿಶ್ವನಾಥನನ್ನು ಉದ್ದೇಶಿಸಿ, ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದನು. ಇದೇ ವಿಚಾರದಲ್ಲಿ ವಿಶ್ವನಾಥ ಕೋಪ ಗೊಂಡು ಛಾವಣಿಯಲ್ಲಿದ್ದ ದೊಣ್ಣೆಯಿಂದ ಮಂಜುನಾಥ ಅವರ ತಲೆಗೆ ಬಲವಾಗಿ ಹೊಡೆದನು ಎಂದು ದೂರಲಾಗಿದೆ.
ಬೆಂಬಲಿಗರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಏ.3ರಂದು ನನ್ನ ನಿರ್ಧಾರ ಪ್ರಕಟಿಸುತ್ತೇನೆ : ಸುಮಲತಾ ಅಂಬರೀಶ್
ಇದರ ಪರಿಣಾಮ ಮಂಜುನಾಥ್ ಅವರ ತಲೆಯಿಂದ ತೀವ್ರ ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹೇಶ ಟಿ.ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.