ಕೋಲಾರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರುತ್ತಿದ್ದು, ಇದೀಗ ಕೋಲಾರದಲ್ಲಿ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತಾಗಿ ವಿಶೇಷವಾಗಿ ಬಣ್ಣಿಸಿದ್ದಾರೆ.ಬಿಜೆಪಿ ಜೆಡಿಎಸ್ ಮೈತ್ರಿ ಸಂಬಂಧವನ್ನು ಮದುವೆ ಎಂದು ಬಣ್ಣಿಸಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ ಪಕ್ಷದ ಶಾಸಕ ಸಮೃದ್ಧಿ ಮಂಜುನಾಥ್ ಈ ರೀತಿ ಹೇಳಿಕೆಯನ್ನ ನೀಡಿದ್ದು, ನಾವು ಗಂಡಿನ ಕಡೆಯವರು ಬಿಜೆಪಿಯವರು ಹೆಣ್ಣಿನ ಕಡೆಯವರು. ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಕೆ. 6 ರಂದು ನಿಶ್ಚಿತಾರ್ಥ. ಎಪ್ರಿಲ್ 26ರಂದು ಮದುವೆ ಎಂದು ಬನ್ನಿಸಿದ್ದಾರೆ.
ಬೆಂಬಲಿಗರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಏ.3ರಂದು ನನ್ನ ನಿರ್ಧಾರ ಪ್ರಕಟಿಸುತ್ತೇನೆ : ಸುಮಲತಾ ಅಂಬರೀಶ್
ಕೋಲಾರ ಕ್ಷೇತ್ರದಲ್ಲಿ ಕೈನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸಿರುವ ವಿಚಾರವಾಗಿ ಮಾತನಾಡಿದ ಅವರು ಕಳೆದೊಂದು ತಿಂಗಳಿನಿಂದ ಕೋಲಾರ ಜಿಲ್ಲೆಯನ್ನು ಹರಾಜು ಹಾಕುತ್ತಿದ್ದಾರೆ. ಇಡೀ ದೇಶದಲ್ಲೇ ಕೋಲಾರ ಜಿಲ್ಲೆಯನ್ನು ಲಜ್ಜೆ ಕೆಟ್ಟವರಂತೆ ಮಾಡಿದ್ದಾರೆ ಎಂದು ಕೋಲಾರದಲ್ಲಿ ಜೆಡಿಎಸ್ ಪಕ್ಷದ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿಕೆ ನೀಡಿದರು.
ಮ್ಯಾಚ್ ಫಿಕ್ಸಿಂಗ್ ಇಲ್ಲದೇ ‘400 ಸೀಟು’ ಗೆಲ್ಲಲು ಸಾಧ್ಯವಿಲ್ಲ: ‘ಮೋದಿ’ ವಿರುದ್ಧ ಘರ್ಜಿಸಿದ ‘ರಾಹುಲ್ ಗಾಂಧಿ’
ನಾವು ಮೂರು ದಿನ ಅಭ್ಯರ್ಥಿಗಳಿದ್ದೇ ಮೊದಲೇ ತೊಡೆತಟ್ಟಿದ್ದೆವು ನಮ್ಮ ವಿರುದ್ಧ ಅಭ್ಯರ್ಥಿಗಳನ್ನು ಕಣಕಳಿಸಲು ಹುಡುಕಾಟ ನಡೆಸಿದ್ದರು.ಕೋಲಾರ ಕಾಂಗ್ರೆಸ್ ನಾಯಕರಲ್ಲಿ ಯಾರೂ ಗಂಡಸರು ಇರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಗಂಡಸರನ್ನು ಹುಡುಕಿಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮೊದಲು ಬೆಳಗಾವಿಯಲ್ಲಿನ ಅವರ ಮನೆ ವಿಳಾಸ ಕೇಳಿ : ಜಗದೀಶ್ ಶೆಟ್ಟರ್ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ
ಎಚ್ ಡಿ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಕೂಡ ವಾಗ್ದಾಳಿ ನಡೆಸಿದ್ದು, ಬಹುಶ ಬಂಡಿ ಸಿದ್ದೇಗೌಡ ಗೆ ಚಿಕ್ಕವಯಸಿನಲ್ಲಿ ನಾಯಿ ಕಚ್ಚಿರಬೇಕು.ಹೀಗಾಗಿ ಕುಮಾರಸ್ವಾಮಿ ಅವರ ಆರೋಗ್ಯ ಕುರಿತು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಮೋದಿ ಹೇಗೋ ಕರ್ನಾಟಕದಲ್ಲಿ ಕುಮಾರಣ್ಣ ಕೂಡ ಹಾಗೆ ಎಂದು ಮುಳಬಾಗಿಲು ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಬಂಧನ ತಿಳಿಸಿದರು.