ಕಲಬುರ್ಗಿ : ನಕಲಿ ಪಿಸ್ತೂಲನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಇಬ್ಬರು ಯುವಕರ ಮೇಲೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನಂತರ ಪೊಲೀಸರು ನಕಲಿ ಫಸ್ಟೂಲನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೇ.5ರಷ್ಟು ಸಂಸದರ ಬಳಿ 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ : ಎಡಿಆರ್ ವರದಿ
ಸೇಡಂ ಪಟ್ಟಣದ ಇಂದಿರಾನಗರದ ನಿವಾಸಿಗಳಾದ ಮಹೇಶ ಹಾಗೂ ಬಸವರಾಜ ಎಂಬ ಯುವಕರು ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋ ಹರಿಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಸ್ಕೋ-ಕೀವ್ ಸಂಘರ್ಷಕ್ಕೆ ‘ಶಾಂತಿಯುತ ಪರಿಹಾರ’ ಮಾರ್ಗಗಳ ಬಗ್ಗೆ ಭಾರತ-ಉಕ್ರೇನ್ ಚರ್ಚೆ
ಈ ರೀತಿಯಲ್ಲಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಜನರಲ್ಲಿ ಆತಂಕ ಹುಟ್ಟುವಂತೆ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹವಾ ಮಾಡಲು ಪ್ರಯತ್ನ ಮಾಡುವ ಕೆಲಸ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಸ್ಪಿ ಅಕ್ಷಯ್ ಹಾಕೆ ಎಚ್ಚರಿಸಿದ್ದಾರೆ.