ಬೆಂಗಳೂರು : ಮಾಜಿ ಬಿಗ್ ಬಾಸ್ ಸ್ಪರ್ಧಿಯಾಗಿರುವ ಪ್ರಶಾಂತ ಸಂಬರ್ಗಿ ಅವರಿಗೆ ಅಪರೀಚಿತರಿಂದ ವಾಟ್ಸಾಪ್ ಹಾಗೂ ಇಮೇಲ್ ಮುಖಾಂತರ ಕೊಲೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದ್ದು.ಆ್ಯಸಿಡ್ ಹಾಕುವುದಾಗಿ ಅಪರಿಚಿತರು ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಪ್ರಶಾಂತ್ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತಂತೆ ಪ್ರಶಾಂತ್ ಸಂಬರಗಿ ಅವರಿಗೆ ವಿದೇಶಿ ಮೊಬೈಲ್ ನಂಬರ್ ಗಳಿಂದ ಈ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗುತ್ತಿದೆ.ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ.
ಈ ಕುರಿತಂತೆ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವ ಅವರು ದೂರಿನಲ್ಲಿ ಮಾರ್ಚ್ 10ರಂದು ಹಲೋ ವಿದೇಶಿ ಮೊಬೈಲ್ ನಂಬರ್ ಗಳಿಂದ ನನಗೆ ಬೆದರಿಕೆ ಸಂದೇಶಗಳು ಬಂದಿವೆ ವಾಟ್ಸಾಪ್ ಹಾಗೂ ಇಮೇಲ್ ಗಳಿಗೆ ನನ್ನ ಹಾಗೂ ನನ್ನ ಕುಟುಂಬದ ಹಲವು ಫೋಟೋಗಳನ್ನು ಕಳುಹಿಸಿ ಬೆದರಿಕೆ ಕೊಲೆ ಸಂದೇಶ ಕಳುಹಿಸಿದ್ದಾರೆ.ನಮ್ಮ ಮೊಬೈಲ್ ಹ್ಯಾಕ್ ಮಾಡಲಾಗಿದೆ. ಅದರಲ್ಲಿನ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ. ವೈಯಕ್ತಿಕ ಫೋಟೋ, ಕಾಲ್ ರೆಕಾರ್ಡ್, ಎಸ್ಎಂಎಸ್ ಹಾಗೂ ಇಮೇಲ್ಗಳನ್ನು ಟ್ರಾನ್ಸ್ಫರ್ ಮಾಡಲಾಗಿದೆ’ ಎಂದು ಪ್ರಶಾಂತ್ ಸಂಬರ್ಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.