ರಾಮನಗರ : ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಸೀರಿ ಕುಕ್ಕರ್ ನೀಡಿ ಮತದಾರರನ್ನು ಆಮಿಷ ಒಡ್ದುತ್ತಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ ಸಂಸದ ಡಿಕೆ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಿದರು.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೊಂಡಂಬಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಸುರೇಶ್ ಭ್ರಷ್ಟ ಅಧಿಕಾರಿಗಳಿಗೆ ಬೆದರಿಸುವಂತಹ ವ್ಯಕ್ತಿ. ದೇಶ ವಿಭಜಿಸುವ ಹೇಳಿಕೆ ನೀಡಿದವರಿಗೆ ಅಧಿಕಾರ ನೀಡಬೇಕಾ? ಚುನಾವಣೆ ವೇಳೆ ಅವರು ಏನು ಬೇಕಾದರೂ ಮಾಡುತ್ತಾರೆ ಮತದಾರರಿಗೆ ಸೀರೆ ಕುಕ್ಕರ್ ನೀಡಿ ಆಮಿಷ ಒಡ್ಡುತ್ತಾರೆ ಎಂದು ಆರೋಪಿಸಿದರು.
ಏ.4 ರಂದು ನಾನು ‘ನಾಮಪತ್ರ’ ಸಲ್ಲಿಸುತ್ತೇನೆ : ಬೆಂಗಳೂರು ಗ್ರಾ. ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಹೇಳಿಕೆ
ಆದರೆ ನೀವು ಸ್ವಾಭಿಮಾನಿಗಳು ಆತ್ಮಸಾಕ್ಷಿಯನ್ನು ಕಳೆದುಕೊಳ್ಳಬೇಡಿ ಬಿಜೆಪಿ ಜೆಡಿಎಸ್ 10 ವರ್ಷದಿಂದ ಕಿತ್ತಾಡುತ್ತಾ ಬಂದಿದ್ದೇವೆ ಈ ಬಾರಿ ನಾವಿಬ್ಬರೂ ಒಂದಾಗಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕಾಗಿದೆ, ಕೋಡಂಬಳಿಯಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.
MP ಚುನಾವಣೆ ಬಳಿಕ ರಾಜ್ಯದಲ್ಲಿ ‘ಕಾಂಗ್ರೆಸ್’ ಸರ್ಕಾರ ಪತನ
ಕೇಂದ್ರದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ ಭವಿಷ್ಯ ನುಡಿದಿದ್ದಾರೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನಿಂದ ತಾನೇ ಪತನಗೊಳ್ಳುತ್ತೆ ಎಂದು ಕೊಂಡಂಬಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.
‘ಚುನಾವಣೆ’ ಬಂದ್ರೆ ಸಾಕು ‘HDK’ಗೆ ‘ಹಾರ್ಟ್ ಸಮಸ್ಯೆ’ ಬರುತ್ತೆ. ಅದು ಹೇಗೆ.? ‘ಕಾಂಗ್ರೆಸ್ ಶಾಸಕ’ ವ್ಯಂಗ್ಯ
ಎರಡು ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದಾರೆ.ಡಾ. ಸಿ ಎನ್ ಮಂಜುನಾಥ್ ಆರೋಗ್ಯ ಸಚಿವರಾಗಲಿ ಎಂದು ನಿಲ್ಲಿಸಿದ್ದೇವೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಲಿ ಎಂದು ನಿಲ್ಲಿಸಿದ್ದೇವೆ. ಡಾಕ್ಟರ್ ಸಿಎನ್ ಮಂಜುನಾಥ್ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದರು ಬಹಳ ಕಷ್ಟಪಟ್ಟು ನಾವು ಹೋಗಿ ಸಾಕಷ್ಟು ಮನವಿ ಮಾಡಿಕೊಂಡ್ವಿ ಎಲ್ಲರ ಮನೆಗೆ ಬಳಿಕ ಚುನಾವಣೆಗೆ ನಿಲ್ಲಲು ಮಂಜುನಾಥ್ ಒಪ್ಪಿದ್ದರು ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದರು.