ರಾಮನಗರ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಹಾಗೂ ವೈದ್ಯರು ಆಗಿರುವ ಡಾ. ಸಿ ಎಂ ಮಂಜುನಾಥ್ ಅವರು ಏಪ್ರಿಲ್ ನಾಲ್ಕರಂದು ನಾನು ಕೂಡ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ‘ಕಾಂಗ್ರೆಸ್’ ಸರ್ಕಾರ ಪತನವಾಗಲಿದೆ : ಸಿಪಿ ಯೋಗೇಶ್ವರ್ ಭವಿಷ್ಯ
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಕೋಡಂಬಳ್ಳಿಯಲ್ಲಿ ಬಿಜೆಪಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಮಂಜುನಾಥ್ ಹೇಳಿಕೆ ನೀಡಿದರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ತಿಳಿಸಿದರು.
‘ಚುನಾವಣೆ’ ಬಂದ್ರೆ ಸಾಕು ‘HDK’ಗೆ ‘ಹಾರ್ಟ್ ಸಮಸ್ಯೆ’ ಬರುತ್ತೆ. ಅದು ಹೇಗೆ.? ‘ಕಾಂಗ್ರೆಸ್ ಶಾಸಕ’ ವ್ಯಂಗ್ಯ
ಡಾ. ಸಿಎನ್ ಮಂಜುನಾಥ್ ಗೆಲ್ಲಿಸಲು ಎಲ್ಲರೂ ಶ್ರಮಿಸುತ್ತಿದ್ದಾರೆ. ನಿನ್ನೆ ರಾಮನಗರದಲ್ಲಿ ಕಾಂಗ್ರೆಸ್ ನಾಯಕರಿಂದ ಶಕ್ತಿ ಪ್ರದರ್ಶನ ಕುರಿತು ಮಾತನಾಡಿದ ಅವರು, ಆ ಶಕ್ತಿ ಪ್ರದರ್ಶನಕ್ಕಿಂತ ಮತಗಟ್ಟೆಯಲ್ಲಿ ಶಕ್ತಿ ಪ್ರದರ್ಶನ ಮುಖ್ಯ. ಮತಪತ್ರದಲ್ಲಿ ಶಕ್ತಿ ಪ್ರದರ್ಶನ ಇರಬೇಕು. ಕೆಲವೆಡೆ ಏಕಾಂಗಿಯಾಗಿ ನಾಮಪತ್ರ ಸಲ್ಲಿಸಿದವರು ಗೆದ್ದಿದ್ದಾರೆ. ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಡಾ. ಸಿ.ಎನ್ ಮಂಜುನಾಥ್ ಟಾಂಗ್ ನೀಡಿದ್ದಾರೆ.
‘ಚುನಾವಣೆ’ ಬಂದ್ರೆ ಸಾಕು ‘HDK’ಗೆ ‘ಹಾರ್ಟ್ ಸಮಸ್ಯೆ’ ಬರುತ್ತೆ. ಅದು ಹೇಗೆ.? ‘ಕಾಂಗ್ರೆಸ್ ಶಾಸಕ’ ವ್ಯಂಗ್ಯ
ನನ್ನ ಹೆಸರಿನ ಮತ್ತೊಬ್ಬ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ.ಆದರೆ ಅವರೇನು ವೈದ್ಯರಲ್ಲ. ಇರಲಿ ನಾನು ಯಾರ ಬಗ್ಗೆಯೂ ವಿರೋಧವಾಗಿ ಮಾತನಾಡುವುದಿಲ್ಲ. ಬಿಜೆಪಿಯಿಂದ ಸ್ಪರ್ಧಿಸಿದ್ದೇನೆ ಇದರಿಂದ ಯಾವುದೇ ರೀತಿಯಾದಂತಹ ಗೊಂದಲ ಉಂಟಾಗುವುದಿಲ್ಲ ಎಂದು ತಿಳಿಸಿದರು.