ಬೆಂಗಳೂರು : ಹಣ ಮನುಷ್ಯನನ್ನು ಎಂತಹ ಕೀಳು ಮಟ್ಟಕ್ಕೆ ಬೇಕಾದರೂ ಇಳಿಸುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಸಾಕು ಮಕ್ಕಳೆ ಹಣಕ್ಕಾಗಿ ತಾಯಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಮಾರ್ಕೆಟ್ನಲ್ಲಿ ನಡೆದಿದೆ.
ಅಣ್ಣಮ್ಮ (56) ಚಾಕು ಇರಿತಕ್ಕೊಳಗಾದ ಮಹಿಳೆ ಎಂದು ಹೇಳಲಾಗುತ್ತಿದೆ.ಚಾಕುವಿನಿಂದ ಇರಿದು ಸಾಕು ಮಕ್ಕಳೆ ತಾಯಿಯನ್ನು ಕೊಲೆಗೆ ಯತ್ನಿಸಿಸಿರುವ ಘಟನೆ ನಡೆದಿದ್ದು, ಸಾಕು ಮಕ್ಕಳಾದ ಸುಮಿತ್ರ ಮುನಿರಾಜು ಎನ್ನುವವರಿಂದ ಈ ಕೃತ್ಯ ನಡೆದಿದೆ. ಅಣ್ಣಮ್ಮ ಎಂಬವರಿಗೆ ಸಾಕು ಮಕ್ಕಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ.ಅಕ್ಕನ ಮಕ್ಕಳಾದ ಸುಮಿತ್ರ ಹಾಗೂ ಮುನಿರಾಜು ನನ್ನು ಅಣ್ಣಮ್ಮ ಎನ್ನುವವರು ಸಾಕುತ್ತಿದ್ದರು.
BREAKING : ತೆಲಂಗಾಣದಲ್ಲಿ ‘BRS’ ಗೆ ಹಿನ್ನಡೆ : ಕಾಂಗ್ರೆಸ್ ಸೇರಲಿರುವ ಸಂಸದ ಕೆ.ಕೇಶವ್ ರಾವ್, ಪುತ್ರಿ ವಿಜಯಲಕ್ಷ್ಮಿ
ತನ್ನ ಅಕ್ಕನ ಮಕ್ಕಳಾದ ಸುಮಿತ್ರಾ ಹಾಗೂ ಮುನಿರಾಜು ಎಂಬುವವರನ್ನ ಇವರು ಸಾಕಿಕೊಂಡಿದ್ದರು. ಆರೋಪಿ ಮುನಿರಾಜು ಆರ್ಎಂಸಿ ಯಾರ್ಡ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ, ಇಲ್ಲಿ ಸಂಬಳ ಕೊಡುತ್ತಿಲ್ಲ, ಕೊಡಿಸಿ ಎಂದು ಸುಮಿತ್ರಾ ಹಾಗೂ ಮುನಿರಾಜು ಅಣ್ಣಮ್ಮನನ್ನು ಕರೆದೊಯ್ದಿದ್ದರು. ಈ ವೇಳೆ ಅಣ್ಣಮ್ಮಗೆ ಚಾಕು ಇರಿದಿರುವ ಮುನಿರಾಜು, ಬಳಿಕ ಮನೆಯಲ್ಲಿದ್ದ 6 ಲಕ್ಷ ನಗದು, ಚಿನ್ನ ದರೋಡೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.