ಜಮ್ಮು ಕಾಶ್ಮೀರ : ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿದ್ದ ವಾಹನವು ಜಿಲ್ಲೆಯ ಬ್ಯಾಟರಿ ಚೆಶ್ಮಾ ಪ್ರದೇಶದಲ್ಲಿ 300 ಅಡಿ ಎತ್ತರದ ಕಮರಿಗೆ ಬಿದ್ದಿದೆ. ಇದರ ಪರಿಣಾಮ 10 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಿಂದ ಎಸ್‌ಯುವಿ ಸ್ಕಿಡ್ ಆಗಿ ರಾಂಬನ್ ಜಿಲ್ಲೆಯಲ್ಲಿ ಕಮರಿಗೆ ಬಿದ್ದ ನಂತರ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ವಾಹನವು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿತ್ತು ಮತ್ತು ಅದು ಜಿಲ್ಲೆಯ ಬ್ಯಾಟರಿ ಚೆಶ್ಮಾ ಪ್ರದೇಶದಲ್ಲಿ 1.15 ರ ಸುಮಾರಿಗೆ 300 ಅಡಿ ಕಮರಿಗೆ ಬಿದ್ದಿದೆ ಎಂದು ಅವರು ಹೇಳಿದರು.
ತಕ್ಷಣ ಸ್ಥಳಕ್ಕೆ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಆಗಮಿಸಿದ್ದು, ಇದೆ ವೇಳೆ ಭಾರೀ ಮಳೆಯ ನಡುವೆ 10 ಪ್ರಯಾಣಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕಾರಿನ ಚಾಲಕ ಜಮ್ಮುವಿನ ಅಂಬ್ ಘೋಥಾದ ಬಲ್ವಾನ್ ಸಿಂಗ್ (47) ಮತ್ತು ಬಿಹಾರದ ಪಶ್ಚಿಮ ಚಂಪಾರಣ್‌ನ ವಿಪಿನ್ ಮುಖಿಯಾ ಭೈರಗಾಂಗ್ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಅವರು ತಿಳಿದುಬಂದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VIDEO | Passenger cab plunges into gorge on Jammu-Srinagar highway. Rescue operation is underway.
(Source: Third Party)
(Full video available on PTI Videos- https://t.co/dv5TRARJn4) pic.twitter.com/op4U4RIrSK— Press Trust of India (@PTI_News) March 29, 2024