ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಉಸ್ತುವಾರಿಯನ್ನಾಗಿ ಕೆಪಿಸಿಸಿ ವಕ್ತಾರ ಹಾಗೂ ಮಾಧ್ಯಮ, ಸಂಯೋಜನೆ ವಿಭಾಗದ ಉಪಾಧ್ಯಕ್ಷ ಅನಿಲ್ ಕುಮಾರ್ ತಡಕಲ್ ನೇಮಕ ಮಾಡಲಾಗಿದೆ.
ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದು, ದಿನಾಂಕ 07-05-2024ರಂದು ಚುನಾವಣೆ ನಡೆಯಲಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಸಹಕಾರಿಯಾಗಲು ಈ ಕೆಳಕಂಡ ಮುಖಂಡರುಗಳನ್ನು ಚುನಾವಣಾ ಪ್ರಚಾರ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದಿದ್ದಾರೆ.
- ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ವಕ್ತಾರರು ಹಾಗೂ ಉಪಾಧ್ಯಕ್ಷರು, ಮಾಧ್ಯಮ, ಸಂಯೋಜನೆ ವಿಭಾಗ, ಕೆಪಿಸಿಸಿ – ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ.
- ಜಿಎ ಬಾವ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ – ಬೈಂದೂರು ವಿಧಾನಸಭಾ ಉಸ್ತುವಾರಿ
- ಲಕ್ಷ್ಮೀ ವೆಂಕಟೇಶ್, ಅಧ್ಯಕ್ಷರು, ಇಂಟಕ್, ಕೆಪಿಸಿಸಿ – ಶಿವಮೊಗ್ಗ ನಗರ ವಿಧಾನಸಭೆ ಉಸ್ತುವಾರಿ.
JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ
ಕರ್ನಾಟಕವು ಅತ್ಯಂತ ದುರ್ದೈವದ ಪರಿಸ್ಥಿತಿಯಲ್ಲಿದೆ- ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್