ಹಾವೇರಿ: ಬಿಜೆಪಿಯಲ್ಲಿನ ಬಂಡಾಯದ ಬಗ್ಗೆ ಮಾತನಾಡುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೋಲಾರ, ಚಿಕ್ಕಬಳ್ಳಾಪುರ ಬಾಗಲಕೋಟೆಯಲ್ಲಿನ ಅವರ ಪಕ್ಷದ ಬಂಡಾಯದ ಬಗ್ಗೆ ಏನು ಹೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ರಾಣೆಬೆನ್ನೂರು ತಾಲೂಕು ಅಸುಂಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿ ಮಾದ್ಯಮಗಳಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಕೋಲಾರ ಕಾಂಗ್ರೆಸ್ ನಲ್ಲಿ ಬಹಳ ವರ್ಷಗಳಿಂದ ಎರಡು ಗುಂಪುಗಾರಿಕೆ ಇದೆ. ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಭಿನ್ನಮತದ ಬಗ್ಗೆ ಬಹಳ ಮಾತನಾಡುತ್ತಿದ್ದಾರಡ. ಈಗ ಡಿಕೆ ಶಿವಕುಮಾರ್ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಬಾಗಲಕೋಟೆ, ಚಿಕ್ಕಬಳ್ಳಾಪುರ ಕೋಲಾರ ಸೇರಿದಂತೆ ಎಲ್ಲಾ ಕಡೆ ಬಂಡಾಯ ಇದೆ ಎಂದು ಹೇಳಿದರು.
ಇದೇ ವೇಳೆ ಶಾಸಕರಾದ ಶಿವರಾಮ್ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಬಿಜೆಪಿ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗ ಅದನ್ನು ಅವರಿಗೇ ಕೇಳಿ ನನ್ನ ಕೇಳಬೇಡಿ ಎಂದು ಹೇಳಿದರು.
ಎಚ್ ಕೆ ಪಾಟೀಲ್ ಹತಾಶರಾಗಿದ್ದಾರೆ
ಇನ್ನು ಬಸವರಾಜ ಬೊಮ್ಮಾಯಿ ದಾವಣಗೆರೆ ಚಾರ್ಲಿ ಎಂಬ ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಹೆಚ್ ಕೆ ಪಾಟೀಲ್ ನಮ್ಮ ಹಿರಿಯರು ಚುನಾವಣೆ ಸಂದರ್ಭದಲ್ಲಿ ವಯಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರು ಈ ವಯಸ್ಸಿನಲ್ಲಿ ಮಂತ್ರಿಗಿರಿಯಲ್ಲಿದ್ದಾರೆ, ನಾನು ಸಂಸದ ಆಗಿ ಕೆಲಸ ಮಾಡಲು ಏನು ತೊಂದರೆ ಇದೆ? ಅವರಿಗೆ ಬೇರೆ ಏನೂ ಮಾತನಾಡಲು ಅವಕಾಶ ಇಲ್ಲ. ಅವರನ್ನು ಸುಸಂಸ್ಕೃತ ಮಂತ್ರಿ ಅಂತ ನಾವು ತಿಳಕೊಂಡಿದ್ದೇವೆ. ಅವರು ನಮ್ಮ ಹಿರಿಯರು, ಅವರಿಗೆ ಒಳ್ಳೆದಾಗಲಿ ಎಂದು ಹೇಳಿದರು.
JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ
BREAKING : ‘ಕೇಜ್ರಿವಾಲ್’ ಮತ್ತೆ 7 ದಿನ ಕಸ್ಟಡಿಗೆ ನೀಡುವಂತೆ ‘ED’ ಮನವಿ, ಆದೇಶ ಕಾಯ್ದಿರಿಸಿದ ಕೋರ್ಟ್