ಬೆಂಗಳೂರು: ಶಕ್ತಿ ಯೋಜನೆಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಟಿಕೆಟ್ ಅನ್ನು ನೀಡುತ್ತಿದೆ. ಆದರೆ ಇಲ್ಲೋಂದು ವಿಚಿತ್ರ ಘಟನೆಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರಿ ಟಿಕೆಟ್ ಕೊಟ್ಟು ಅವರಿಬ್ಬರ ಜೊತೆಯಲ್ಲಿ ದ್ದ ಲವ್‌ಬರ್ಡ್ಸ್‌ಗೆ 444 ಟಿಕೆಟ್ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಿಂದ ಮೈಸೂರಿಗೆ ಅಜ್ಜಿ ಮೊಮ್ಮಗಳು ತೆರಳುವ ವೇಳೇಯಲ್ಲಿ ತಮ್ಮೊಂಧಿಗೆ ಇದ್ದ ಲವ್‌ಬರ್ಡ್ಸ್‌ಗೆ ಕಂಡಕ್ಟರ್ ಟಿಕೆಟ್ ನೀಡಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಲಾಗಿದೆ. ಈ ಬಗ್ಗೆ ಕಂಡಕ್ಟರ್ ಅನ್ನು ಪ್ರಶ್ನೆ ಮಾಡಿದರೇ ನಮಗೆ ಇಲಾಖೆಯಿಂದ ಆದೇಶವಿದ್ದು ಈ ಕಾರಣಕ್ಕೆ ನಾವು ಟಿಕೆಟ್ ನೀಡಿದ್ದೇವೆ. ಒಂದು ವೇಳೆ ನಾವು ಟಿಕೇಟ್ ನೀಡದೇ ಹೋದಲಿ ನಮ್ಮನ್ನು ಅಮಾನತ್ತು ಮಾಡಲಾಗುತಿತ್ತು ಅಂಥ ತಮ್ಮ ನೋವನ್ನು ಹೊರ ಹಾಕಿದ್ದಾರೆ.