ಬೆಂಗಳೂರು : ನಟ ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಹೊರಿಸಿದ್ದ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಕಳೆದ ವರ್ಷ ಸುದೀಪ ಅವರು ಮಾನ ನಷ್ಟ ಮೊಕದ್ದಮೆ ಹೂಡಿದ್ದರು.ಇದೀಗ ನಿರ್ಮಾಪಕರ ವಿರುದ್ಧ ನಟ ಸುದೀಪ್ ದಾಖಲಿಸಿದ್ದ ಕೆಸ್ ರದ್ದಿಗೆ ಹೈಕೋರ್ಟ್ ನಿರಾಕರಿಸಿದೆ ಮಾನನಷ್ಟ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ನಿರ್ಮಾಪಕ ಎಂಎನ್ ಸುರೇಶ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಇದೀಗ ವಜಾಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ವಿರುದ್ಧ ಎಂಎಂ ಕುಮಾರ್ ಸುರೇಶ್ ಆರೋಪ ಹೊರಿಸಿದ್ದರು. ಆರೋಪದ ಹಿನ್ನೆಲೆಯಲ್ಲಿ ಸುದೀಪ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಬೆಂಗಳೂರಿನ 13ನೇ ಎಸಿ ಎಂ ಎಂ ಕೋರ್ಟ್ ಈ ಕುರಿತಂತೆ ಸಂಬಂಧಿಸಿದ ನಿರ್ಮಾಪಕರಿಗೆ ಸಮನ್ಸ್ ಜಾರಿಗೊಳಿಸಿತ್ತು. ಸಮನ್ಸ್ ರದ್ದು ಕೋರಿ ನಿರ್ಮಾಪಕ ಎಂ ಎನ್ ಸುರೇಶ್ ಅರ್ಜಿ ಸಲ್ಲಿಸಿದರು. ಆರೋಪಗಳಿಂದ ವರ್ಚಸ್ಸಿಗೆ ಧಕ್ಕೆಯಾಗಿರುವುದಾಗಿ ಸುದೀಪ್ ಅವರ ಹೇಳಿಕೆ ಇದೆ. ವಿಚಾರಣ ನ್ಯಾಯಾಲಯ ಸಮನ್ಸ್ ಜಾರಿ ಗೊಳಿಸಿರುವುದು ಸೂಕ್ತವಾಗಿದೆ. ನ್ಯಾ. ಎಸ್ ವಿಶ್ವಜೀತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದಿಂದ ಇದೀಗ ಅರ್ಜಿ ವಜಾ ಗೊಳಿಸಿ ಆದೇಶ ಹೊರಡಿಸಲಾಗಿದೆ.
ಪ್ರಕರಣ ಹಿನ್ನೆಲೆ?
ಸುದೀಪ್, ವಿರುದ್ಧ ನಿರ್ಮಾಪಕರಾದ ಎನ್ಎಂ ಕುಮಾರ್ ಎಂಎನ್ ಸುರೇಶ್ ಅವರುಗಳು ಸುದೀಪ್ ವಿರುದ್ಧ ವಂಚನೆ ಆರೋಪ ಹೊರಿಸಿದ್ದರು. ಸುದೀಪ್ ತಮ್ಮಿಂದ ಅಡ್ವಾನ್ಸ್ ಪಡೆದು ಡೇಟ್ಸ್ ನೀಡದೆ ಸತಾಯಿಸುತ್ತಿದ್ದಾರೆ. ಕೊಟ್ಟಿರುವ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದಿದ್ದರು. ಮಾತ್ರವಲ್ಲದೆ ‘ಹುಚ್ಚ’ ಸಿನಿಮಾದ ನಿರ್ಮಾಪಕ ರೆಹಮಾನ್ ಸಹ ಸುದೀಪ್ ತಮಗೆ 35 ಲಕ್ಷ ರೂಪಾಯಿ ಹಣ ಕೊಡಬೇಕು ಎಂದು ಆರೋಪ ಮಾಡಿದ್ದರು.
ಎನ್ಎಂ ಕುಮಾರ್, ಎಂಎನ್ ಸುರೇಶ್ ಅವರುಗಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚು ಸುದೀಪ್ ಇಬ್ಬರೂ ನಿರ್ಮಾಪಕರಿಗೆ ವಕೀಲರ ಮೂಲಕ ನೊಟೀಸ್ ಕಳಿಸಿ ಬೇಷರತ್ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಅದಕ್ಕೆ ಬಗ್ಗದ ನಿರ್ಮಾಪಕರು ಮತ್ತೊಮ್ಮೆ ಸುದೀಪ್ ವಿರುದ್ಧ ಆರೋಪಗಳನ್ನು ಮುಂದುವರೆಸಿದ್ದರು. ಹೇಳಿದ ಮಾತಿನಂತೆ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಖುದ್ದಾಗಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಗಮಿಸಿದ ಸುದೀಪ್, ತಮ್ಮ ವಿರುದ್ಧ ಆರೋಪ ಮಾಡಿರುವ ನಿರ್ಮಾಪಕರಾದ ಎನ್ಎಂ ಕುಮಾರ್, ಎಂಎನ್ ಸುರೇಶ್ ಹಾಗೂ ರೆಹಮಾನ್ ಅವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ನಿರೂಪಿಸಲು ಕೆಲ ಸಾಕ್ಷ್ಯಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ವಕೀಲ ಅಜಯ್ ಕಡಕೋಳ್ ಮೂಲಕ ಎನ್ಎಂ ಕುಮಾರ್, ಎಂಎನ್ ಸುರೇಶ್ ಅವರುಗಳ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುದೀಪ್ ದಾಖಲಿಸಿದ್ದರು.