ನವದೆಹಲಿ : ಲೋಕಸಭಾ ಚುನಾವಣೆಗೂ ಮುನ್ನ ಎಲ್ಲ ನಾಯಕರು ಪಕ್ಷಾಂತರದ ರಾಜಕೀಯದಲ್ಲಿ ತೊಡಗಿದ್ದಾರೆ. ಈಗ ಪಂಜಾಬ್ನಲ್ಲಿ ಕಾಂಗ್ರೆಸ್ಗೆ ದೊಡ್ಡ ಹಿನ್ನಡೆಯಾಗಿದೆ. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ ರವ್ನೀತ್ ಬಿಟ್ಟು ಕಾಂಗ್ರೆಸ್ ಜೊತೆಗಿನ ಸಂಬಂಧವನ್ನ ಮುರಿದುಕೊಂಡ ನಂತರ ಬಿಜೆಪಿಗೆ ಸೇರಿದ್ದಾರೆ.
ಹಿರಿಯ ಬಿಜೆಪಿ ನಾಯಕ ವಿನೋದ್ ತಾವ್ಡೆ ಮಂಗಳವಾರ ಸಂಜೆ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಟ್ಟು ಅವರನ್ನ ಹೂಗುಚ್ಛ ನೀಡಿ ಸ್ವಾಗತಿಸಿದರು.
ರವ್ನೀತ್ ಮೂರು ಬಾರಿ ಸಂಸದರಾಗಿದ್ದಾರೆ.!
ರವ್ನೀತ್ ಬಿಟ್ಟು ಅವರನ್ನು ಪಂಜಾಬ್’ನ ಹಿರಿಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ಮೂರು ಬಾರಿ ಸಂಸದರಾಗಿದ್ದಾರೆ. ಅವರು 2009ರಲ್ಲಿ ಆನಂದ್ಪುರ್ ಸಾಹಿಬ್ ಸ್ಥಾನದಿಂದ ಸಂಸದರಾಗಿ ಆಯ್ಕೆಯಾದರು. ಇದರ ನಂತರ, ಅವರು 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಅದ್ಭುತ ಗೆಲುವು ಸಾಧಿಸಿದರು.
BREAKING : ‘CUET UG’ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಹೊಸ ದಿನಾಂಕ ಹೀಗಿದೆ! CUET UG 2024
ಚುನಾವಣೆ ಹೊತ್ತಲ್ಲಿ ಶೋಭಾ ಕರಂದ್ಲಾಜೆಗೆ ಸಂಕಷ್ಟ : ಮತ್ತೆ ಮುನ್ನೆಲೆಗೆ ಬಂದ ‘KIADB’ ಹಗರಣ
ಸಂದೇಶ್ಖಾಲಿ ಸಂತ್ರಸ್ತೆಗೆ ‘ಪ್ರಧಾನಿ’ ಕರೆ, “ಶಕ್ತಿ ಸ್ವರೂಪ” ಎಂದು ಬಣ್ಣಿಸಿದ ‘ಮೋದಿ’