ಶಿವಮೊಗ್ಗ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿದ್ದರಿಂದ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಪುತ್ರರ ವಿರುದ್ಧ ವಾಗ್ದಾಳಿನ ಮುಂದುವರಿಸಿದ್ದು ಇದೀಗ ಮತ್ತೆ ಇಡೀ ಕಾರಿಂದು ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು ಬೇಡ ಜನ ಬೇಡ ಆದರೆ ಶೋಭಾ ಮಾತ್ರ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
BREAKING : ಚುನಾವಣೆ ಹೊತ್ತಲ್ಲಿ ‘ಬಿಜೆಪಿ’ಗೆ ಬಿಗ್ ಶಾಕ್ : ‘ಕೈ’ ಹಿಡಿಯಲಿರುವ ಮಾಜಿ ಸಚಿವ ಕೋಟೆ ಶಿವಣ್ಣ
ಶಿವಮೊಗ್ಗದಲ್ಲಿ ಸಮಾರಂಭ ಒಂದರಲ್ಲಿ ಮಾತನಾಡಿದ ಅವರು, ಕಳೆದ ಎಂಎಲ್ಎ ಚುನಾವಣೆಯಲ್ಲಿ ವಿಜಯೇಂದ್ರ ತಿಣುಕಿ ಗೆದ್ದಿದ್ದಾರೆ ಹೀಗಂತ ಶ್ರೀಕಾರಿಪುರದ ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೋಭಾ ಗೋ ಬ್ಯಾಕ್ ಅಂದರು ಆದರೂ ಕೂಡ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಕಾರ್ಯಕರ್ತರು ಬೇಡ ಜನ ಬೇಡ ಆದರೆ ಇವರಿಗೆ ಶೋಭಾ ಬೇಕು ಲೋಕಸಭೆಯಲ್ಲಿ ಕೂಡ ಹೊಂದಾಣಿಕೆ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
BREAKING : ಚಿತ್ರದುರ್ಗದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ’20 ಲಕ್ಷಕ್ಕೂ’ ಹೆಚ್ಚು ಹಣ ಜಪ್ತಿ
ಹಿಂದುತ್ವದ ಹುಲಿಗಳಿಗೆ ಯಾಕೆ ಟಿಕೆಟ್ ಕೊಡಲಿಲ್ಲ? ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಇವರೆಲ್ಲ ಮಾಡಿದ್ದು ತಪ್ಪೇನು ಹಿಂದುತ್ವದ ಪರ ಹೋರಾಟ ಮಾಡಿದ್ದು ತಪ್ಪಾ? ಎಂದು ಪ್ರಶ್ನಿಸಿದರು.ಅಸೆಂಬ್ಲಿ ಚುನಾವಣೆಯಲ್ಲಿ ಹೊಂದಾಣಿಕೆಯ ರಾಜಕಾರಣ ನಡೆಯಿತು ಹಿಂದುಗಳನ್ನು ಬಲಿ ತೆಗೆದುಕೊಂಡರು ಲಿಂಗಾಯತರನ್ನು ಬಲಿ ತೆಗೆದುಕೊಂಡು ಈ ಬಾರಿ ಕೂಡ ಶಿವಮೊಗ್ಗ ಕ್ಷೇತ್ರದಲ್ಲಿ ಶಕ್ತಿ ಇಲ್ಲದಂತಹ ಡಮ್ಮಿ ಕ್ಯಾಂಡೇಟ್ ಹಾಕಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ನವರು ನನಗೆ ಫೋನ್ ಮಾಡಿ ಕಾಂಗ್ರೆಸ್ ಡಮ್ಮಿ ಕ್ಯಾಂಡಿಡೇಟ್ ಇದೆ ನಾನು ನಿಮಗೆ ವೋಟ್ ಮಾಡುತ್ತೇವೆ ಎಂದು ಹೇಳುತ್ತಾರೆ.
ಇನ್ಮುಂದೆ 14 ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳು ‘ಸಾಮಾಜಿಕ ಮಾಧ್ಯಮ’ ಬಳಸುವಂತಿಲ್ಲ : ‘ಫ್ಲೋರಿಡಾ’ ಮಹತ್ವದ ನಿರ್ಧಾರ
ಡಮ್ಮಿ ಕ್ಯಾಂಡೇಟ್ ಅಂತ ಹೇಳಿದಾಗ ಮಧು ಬಂಗಾರಪ್ಪ ಅವರಿಗೆ ಸಿಟ್ಟು ಬಂದಿತ್ತು. ಈಶ್ವರಪ್ಪನಿಗೆ ಗಂಡಸ್ತನ ಇದ್ದರೆ ಬಿಜೆಪಿ ಟಿಕೆಟ್ ತರಬೇಕೆಂದು ಮಧು ಬಂಗಾರಪ್ಪ ಹೇಳಿದ್ದಾರೆ. ಗಂಡಸ್ತನ ಇರುವ ವ್ಯಕ್ತಿ ಜೊತೆ ನೀವು ಹೊಂದಾಣಿಕೆ ಮಾಡಿಕೊಂಡರೆ ನಾನು ಎಲ್ಲಿಂದ ಟಿಕೆಟ್ ತರಲಿ? ನಾನು ಅಲ್ಲಿ ಗಂಡಸ್ತನ ತೋರಿಸುವುದಿಲ್ಲ ಚುನಾವಣೆಯಲ್ಲಿ ಗೆದ್ದು ಗಂಡಸ್ತನ ತೋರುಸ್ತೀನಿ ಎಂದು ಸವಾಲು ಹಾಕಿದರು.