ಬೆಂಗಳೂರು : ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಕತರ್ನಾಕ್ ಅಂತರಾಜ್ಯ ಕಳ್ಳರ ಗ್ಯಾಂಗ್ ನನ್ನು ಇದೀಗ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಪ್ರಯಾಣಿಕರಿಗೆ ಪ್ರಜ್ಞೆ ತಪ್ಪುವ ವಸ್ತು ನೀಡಿ ಇವರು ಕಳ್ಳತನ ಮಾಡುತ್ತಿದ್ದರು. ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದರು ಎನ್ನಲಾಗುತ್ತಿದೆ.
10 ನಿಮಿಷದಲ್ಲಿ 400 ಉದ್ಯೋಗಿಗಳನ್ನ ವಜಾಗೊಳಿಸಿದ ‘Bell’ : ‘ನಾಚಿಕೆಗೇಡು’ ಎಂದ ಯೂನಿಯನ್
ಇದೀಗ ರೈಲ್ವೆ ಪೊಲೀಸ್ರಿಂದ ಮೂರು ಆರೋಪಿಗಳನ್ನು ಬಂದಿಸಲಾಗಿದೆ. ಆರೋಪಿಗಳಿಂದ 24 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನ ಮಹಮ್ಮದ್ ಶೌಕತ್ ಅಲಿ, ಮಹಮ್ಮದ್ ಸತ್ತರ್, ಮೊಹಮ್ಮದ್ ಆಸಾಫ್ ಬಂಧಿತ ಆರೋಪಿಗಳು ಎಂದು ಹೇಳಲಾಗುತ್ತಿದೆ.
ದರೋಡೆ ಹೇಗೆ?
ಆರೋಪಿಗಳು ಸಂಪೂರ್ಣ ನಕಲಿ ದಾಖಲೆ ನೀಡಿ ಟಿಕೆಟ್ ಬುಕ್ ಮಾಡುತ್ತಿದ್ದರು ಎನ್ನಲಾಗುತ್ತಿದೆ. ನಂತರ ಪ್ರಯಾಣಿಕರ ಜೊತೆ ಪರಿಚಯ ದವರಂತೆ ಮಾತಿಗೆಳೆಯುತ್ತಾರೆ.ಎರಡು ದಿನಗಳ ಕಾಲ ಪ್ರಯಾಣ ಮಾಡುವಾಗ ಪರಿಚಯ ಮಾಡಿಕೊಳ್ಳುತ್ತಾರೆ. ಬೇರೆ ಪ್ರಯಾಣಿಕರ ಜೊತೆ ಊಟ ತಿಂಡಿ ಕೂಡ ಮಾಡುತ್ತಿದ್ದರು.
BREAKING : ಉಡುಪಿ : ಮೀನು ಹಿಡಿಯಲು ಹೋದ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ದುರ್ಮರಣ
ಅಲ್ಲದೆ ತುಂಬಾ ಕ್ಲೋಸ್ ಆಗುತ್ತಿದ್ದರು. ಸರಿಯಾದ ಸಮಯ ನೋಡಿ ಕೋಲ್ಡ್ರಿಂಗ್ಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಅವರಿಗೆ ಕೊಡುತ್ತಿದ್ದರು. ಬಾದಾಮಿ ಹಾಲಿನಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕೊಡುತ್ತಿದ್ದರು ಪ್ರಜ್ಞೆ ತಪ್ಪಿದ ಬಳಿಕ ಹಣ ಆಗಲಿ ಚಿನ್ನಾಭರನವನ್ನು ದೋಚಿ ಪರಾರಿಯಾಗುತ್ತಿದ್ದರು.ಕೇರಳ ತಮಿಳುನಾಡು ಅಸಾಂ ಕಲ್ಕತ್ತಾದಲ್ಲೂ ಇವರು ಕೃತ್ಯ ನಡೆಸಿದ್ದಾರೆ ಎಂದು ರೈಲ್ವೆ ಎಸ್‍ಪಿ ಆಗಿರುವ ಸೌಮ್ಯಲತಾ ಅವರು ಈ ಕುರಿತಂತೆ ಮಾಹಿತಿ ನೀಡಿದರು.