ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಓರ್ವ ಮುಳುಗುತ್ತಿದ್ದ ವೇಳೆ ಆತನ ರಕ್ಷಣೆಗೆ ತೆರಳಿದ ಇನ್ನೂ ಮೂವರು ಸೇರಿದಂತೆ ಒಟ್ಟು ನಾಲ್ವರು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.
ಮೃತರನ್ನು ನಾಗೇಶ್ (40) ಭರತ್ (17) ಗುರೂಪದ (32) ಮಹದೇವ (16)ಮೃತ ದುರ್ದೈವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಕಾವೇರಿ ನದಿಯಲ್ಲಿ ಈಜುವ ವೇಳೆ ನೀರಿನಲ್ಲಿ ಓರ್ವ ಮುಳುಗಿದ್ದ. ಈ ವೇಳೆ ರಕ್ಷಣೆಗೆ ಹೋಗಿದ್ದ ಮೂವರು ಸೇರಿದಂತೆ ನಾಲ್ವರು ಇದೀಗ ದುರ್ಮರಣ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನ ಕನಕಗಿರಿಯಿಂದ ಮುತ್ತತ್ತಿ ಪ್ರವಾಸಕ್ಕೆ ಸುಮಾರು 40 ಜನರು ಬಂದಿದ್ದರು.ಒಂದೇ ಬಸ್ ನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿದಂತೆ 40 ಜನರು ಆಗಮಿಸಿದ್ದರು. ಇದೀಗ ಇನ್ನರ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಶವಕ್ಕಾಗಿ ಕಾರ್ಯ ಶೋಧ ಕಾರ್ಯ ಮುಂದುವರೆದಿದೆ ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.