ಮಹಾರಾಷ್ಟ್ರ : ಕಿಡಿಗೇಡಿಗಳು ಮಸೀದಿಯೊಂದರ ಗೋಡೆಯ ಮೇಲೆ ಶ್ರೀ ರಾಮ್ ಎಂದು ಬರಹ ಬರೆದು ಕೋಮು ಗಲಭೆಗೆ ಕಾರಣವಾದಂತ ಘಟನೆ ಮಹಾರಾಷ್ಟ್ರದ ಮುಂಬೈನ ಬೀಡ್ ಜಿಲ್ಲೆಯಲ್ಲಿ ನಡೆದಿದ್ದು ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.
BREAKING : ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ; ಐವರು ಚೀನೀಯರು ಸೇರಿ 6 ಮಂದಿ ದುರ್ಮರಣ
ಮಜಲ್‌ಗಾಂವ್‌ನ ಮರ್ಕಝಿ ಮಸೀದಿಯ ಗೋಡೆಯ ಮೇಲೆ ಸಂಜೆಯ ಸಮಯದಲ್ಲಿ ಕಿಡಿಗೇಡಿಯೊಬ್ಬ ಶ್ರೀರಾಮ ಎಂದು ಬರೆದಿದ್ದಾನೆ. ಇದನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂಮರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣವಿದ್ದು,ಪೊಲೀಸರು ನಾಕಾಬಂಧಿ ಹಾಕಿದ್ದಾರೆ.
BREAKING : ಬೆಂಗಳೂರಲ್ಲಿ ಟಿಕೇಟ್ ವಿಚಾರವಾಗಿ ಕಿರಿಕ್ : ಮಹಿಳೆಯ ಮೇಲೆ ಹಲ್ಲೆ ಮಾಡಿದ ‘BMTC’ ಬಸ್ ಕಂಡೆಕ್ಟರ್
ಸಂಜೆ 5 ಗಂಟೆ ಸುಮಾರಿಗೆ ಕೆಲ ವಿರೋಧಿಗಳು ಧಾರ್ಮಿಕತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಸೀದಿಯ ಗೋಡೆಯ ಮೇಲೆ ಶ್ರೀರಾಮ ಎಂದು ಬರೆದಿದ್ದಾರೆ. ನಾವು ಸೆಕ್ಷನ್ 295 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ನಾವು ದುಷ್ಕರ್ಮಿಯನ್ನು ಪತ್ತೆ ಹಚ್ಚುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಮಜಲಗಾಂವ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಧೀರಜ್ ಕುಮಾರ್ ತಿಳಿಸಿದ್ದಾರೆ.