ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜೋಳವು ಸಿರಿಧಾನ್ಯಗಳಲ್ಲಿ ಒಂದಾಗಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ ಒಂದಿದೆ. ಜೋಳವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಜೋಳದಿಂದ ತಯಾರಿಸಿದ ರೊಟ್ಟಿ ತುಂಬಾ ಶಕ್ತಿಯುತ ಆಹಾರವಾಗಿದೆ. ಯಾಕಂದ್ರೆ, ಜೋಳದ ಹಿಟ್ಟು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಜೋಳದ ರೊಟ್ಟಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಇದನ್ನು ತಿನ್ನುವುದು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನ ನೀಡುತ್ತದೆ. ಇದರಲ್ಲಿ ನಾರಿನಂಶವೂ ಅಧಿಕವಾಗಿದೆ ಮತ್ತು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಜೋಳದಿಂದ ತಯಾರಿಸಿದ ರೊಟ್ಟಿಗಳಲ್ಲಿ ಕಬ್ಬಿಣದ ಅಂಶ ಲಭ್ಯವಿದ್ದು, ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಇವುಗಳನ್ನ ತಿನ್ನುವುದ್ರಿಂದ ಸಮಸ್ಯೆಯಿಂದ ಹೊರಬರಬಹುದು. ನೀವು ಈ ರೊಟ್ಟಿಗಳನ್ನ ಆಗಾಗ್ಗೆ ತಿನ್ನುತ್ತಿದ್ದರೆ, ದೇಹದಲ್ಲಿ ವಯಸ್ಸಾದ ಛಾಯೆಗಳು ಸಹ ಕಡಿಮೆಯಾಗುತ್ವೆ.
ಅವು ದೇಹದಲ್ಲಿನ ಫ್ರೀ ರಾಡಿಕಲ್’ಗಳನ್ನ ಸಹ ನಾಶಪಡಿಸುತ್ತವೆ. ಅಂತೆಯೇ, ತೂಕ ಇಳಿಸಿಕೊಳ್ಳಲು ಬಯಸುವವರು ಈ ರೊಟ್ಟಿಗಳನ್ನ ತಿನ್ನುವುದ್ರಿಂದ ತ್ವರಿತವಾಗಿ ತೂಕ ಇಳಿಸಿಕೊಳ್ಳಬಹುದು. ಇನ್ನು ರೊಟ್ಟಿ ತಕ್ಷಣ ಶಕ್ತಿಯ ಮಟ್ಟವನ್ನ ಹೆಚ್ಚಿಸುತ್ತದೆ.
ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳನ್ನು ಸಹ ನಾಶಪಡಿಸುತ್ತದೆ. ಜೋಳದ ರೊಟ್ಟಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನ ಕಡಿಮೆ ಮಾಡಬಹುದು. ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ, ಮಧುಮೇಹ ಮತ್ತು ಬಿಪಿ ಇರುವವರು ಸಹ ರೊಟ್ಟಿ ತಿನ್ನುವ ಉತ್ತಮ.
‘ಕಿಡ್ನಿ’ ಕಾಯಿಲೆಗಳನ್ನ ಮೊದಲೇ ಗುರುತಿಸೋದು ಹೇಗೆ.? ಚಿಕಿತ್ಸೆ ಹೇಗೆ.? ಇಲ್ಲಿದೆ, ಮಾಹಿತಿ
ದಾವಣಗೆರೆ: ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆ, ನಿರ್ವಹಣೆಗೆ ಸಿಬ್ಬಂದಿಗಳ ನೇಮಕ