ಮಂಡ್ಯ : ಅಪಾರ ಪ್ರಮಾಣದ ಬೆಳೆದಿದ್ದ ತೋಟಕ್ಕೆ ಯಾರೋ ಕಿಟಗೇಡಿಗಳು ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿದ್ದರಿಂದ ತೋಟದಲ್ಲಿದ್ದ ಅಪಾರ ಪ್ರಮಾಣದ ತೆಂಗು ಬಾಳೆ ಅಡಿಕೆ ಬೆಳೆಗಳಲ್ಲೆಲ್ಲ ಬೆಂಕಿಗಾಹುತಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯಲ್ಲಿ ನಡೆದಿದೆ.
ಲಂಡನ್ ನಲ್ಲಿ ಕಸದ ಲಾರಿಗೆ ಸೈಕಲ್ ಡಿಕ್ಕಿ : ಭಾರತೀಯ ಮೂಲದ ‘PHD’ ವಿದ್ಯಾರ್ಥಿನಿ ಸಾವು
ಗ್ರಾಮದ ಪ್ರಗತಿ ಪರ ರೈತ ಕುಮಾರಸ್ವಾಮಿ ಅವರ ಜಮೀನಿನಲ್ಲಿ ಯಾರೋ ಕಿಡಿಗೇಡಿಗಳು ಅವರು ಬೆಳೆದಂತಹ ಬೆಳೆಗಳನ್ನು ನೋಡಿ ಸಹಿಸಲಾಗದೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ಗ್ರಾಮದ ಹೊರವಲಯದಲ್ಲಿ 1 ಕಿ. ಮೀ. ದೂರದಲ್ಲಿರುವ ರೈತ ಕುಮಾರಸ್ವಾಮಿ ಅವರ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಆವರಿಸಿಕೊಂಡು ಗಿಡ, ಮರ ಹಾಗೂ ಹನಿ ನೀರಾವರಿ ಪೈಪ್ಗಳು ಸುಟ್ಟು ಹೋಗಿವೆ.
BREAKING: ‘ಮೋದಿ’ ಬಗ್ಗೆ ಅವಹೇಳನಕಾರಿ ಹೇಳಿಕೆ: ‘ಶಿವರಾಜ ತಂಡರಗಿ’ ವಿರುದ್ಧ ಚುನಾವಣಾ ಆಯೋಗಕ್ಕೆ ‘ಬಿಜೆಪಿ ದೂರು’
ಸಂಜೆ ವೇಳೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಎಲ್ಲವೂ ನಾಶವಾಗಿದೆ. ಕುಮಾರಸ್ವಾಮಿ ಅವರ ಒಂದು ಮುಕ್ಕಾಲು ಎಕರೆ ಕೃಷಿ ಜಮೀನಿನಲ್ಲಿ 100 ತೆಂಗಿನ ಮರಗಳಿವೆ. ಇದಲ್ಲದೆ 1 ಸಾವಿರ ಬಾಳೆ ಗಿಡ ಹಾಗೂ 200 ಅಡಿಕೆ ಮರಗಳು ಬೆಳೆಯುತ್ತಿದ್ದವು. ಬೇಸಾಯಕ್ಕೆಂದು 2.5 ಲಕ್ಷ ರೂ. ಖರ್ಚು ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
BREAKING : ಸುರಕ್ಷತಾ ಬಿಕ್ಕಟ್ಟಿನ ನಡುವೆ ಬೋಯಿಂಗ್ CEO ‘ಡೇವ್ ಕ್ಯಾಲ್ಹೌನ್’ ರಾಜೀನಾಮೆ
ಪ್ರತಿ ದಿನ ಹನಿ ನೀರಾವರಿ ಪದ್ಧತಿ ಮೂಲಕ ನೀರು ಹಾಯಿಸುತ್ತಿದ್ದರಿಂದ ಗಿಡ ಮತ್ತು ಮರಗಳು ಕೂಡ ಚೆನ್ನಾಗಿ ಬೆಳೆಯುತ್ತಿದ್ದವು. ಉಳುಮೆ ಮಾಡುವ ಬದಲು ಕಳೆ ಸಹಿತ ಗಿಡಗಳನ್ನು ಭೂಮಿಯಲ್ಲಿಯೇ ಕೊಳೆಸಿ ಗೊಬ್ಬರ ಮಾಡುತ್ತಿದ್ದೆ ಎಂದು ವಿವರಿಸಿರುವ ಕುಮಾರಸ್ವಾಮಿ, ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ರೈತ ಕುಮಾರಸ್ವಾಮಿ ಅವರು ಪೊಲೀಸ್