ಶಿವಮೊಗ್ಗ : ಶಿವಮೊಗ್ಗ ರಂಗಾಯಣವು 2024ರ ಏಪ್ರಿಲ್ 12 ರಿಂದ ಮೇ 01 ರವರೆಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ‘ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ-2024’ ಹೆಸರಿನಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಆಸಕ್ತ 08 ರಿಂದ 14 ವರ್ಷ ವಯೋಮಾನದ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
ಶಿಬಿರದಲ್ಲಿ ಮಕ್ಕಳಿಗೆ ಮುಖ್ಯವಾಗಿ ಕಥೆ ಹೇಳುವುದು, ಪವಾಡ ರಹಸ್ಯ ಬಯಲು, ಕುದುರೆ, ಎತ್ತಿನಗಾಡಿ ಸವಾರಿ, ಹೋಳಿ, ನಾಟಕ, ಮೈಮ್, ರಂಗಾಟ, ಜನಪದ ಗೀತೆ, ಹುಲಿನೃತ್ಯ, ಸಿಂಹನೃತ್ಯ, ಮಕ್ಕಳ ಸಂತೆ, ರಂಗ ಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವೀಕ್ಷಣೆ, ಹೊರಸಂಚಾರ, ಮಡಿಕೆ ತಯಾರಿ, ತಮಟೆ ವಾದನ ಹೀಗೆ ಹಲವು ಮಜಲುಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತ ನಾಟಕಕ್ಕೆ ಸಂಬಂಧಿಸಿದ ಪೂರಕ ಕಲೆಗಳನ್ನು ಶಿಬಿರದಲ್ಲಿ ಕಲಿಸಲಾಗುವುದು. ಮೇ 02 ಮತ್ತು 03 ರಂದು ಶಿಬಿರದಲ್ಲಿ ಕಲಿಸಿದ ನಾಟಕಗಳನ್ನು/ ಕಲೆಗಳನ್ನು ‘ರಂಗಾಯಣದ ಚಿಣ್ಣರ ರಂಗೋತ್ಸವ’ದಲ್ಲಿ ಪ್ರದರ್ಶಿಸಲಾಗುವುದು ಎಂದು ರಂಗಾಯಣದ ನಿರ್ದೇಶಕರು ತಿಳಿಸಿರುತ್ತಾರೆ.
ತರಗತಿಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸಿಕೊಡಲಾಗುವುದು, 150 ಮಕ್ಕಳು ಭಾಗವಹಿಸಲು ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ. ರಂಗಭೂಮಿಯಲ್ಲಿ ಮತ್ತು ಮಕ್ಕಳ ಶಿಬಿರಗಳನ್ನು ಸಂಘಟಿಸಿ ಅನುಭವವಿರುವ ಕರ್ನಾಟಕದ ಕ್ರಿಯಾಶೀಲ ರಂಗನಿರ್ದೇಶಕರು, ರಂಗಭೂಮಿಯ ನೇಪಥ್ಯ ಕೆಲಸಗಳಲ್ಲಿ ಪರಿಣಿತರಾಗಿರುವ ಸಾಧಕರು, ವಿವಿಧ ಕಲಾಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ರಾಜ್ಯದ ಕಲಾವಿದರುಗಳು ಮತ್ತು ಶಿವಮೊಗ್ಗ ರಂಗಾಯಣದ ಕಲಾವಿದರು ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸುವರು ಎಂದು ಅವರು ತಿಳಿಸಿರುತ್ತಾರೆ.
ಆಸಕ್ತರು ನಿಗಧಿತ ನಮೂನೆ ಅರ್ಜಿಯನ್ನು ಏ. 02 ರಂದು ಶಿವಮೊಗ್ಗ ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಕಚೇರಿಯಿಂದ ಪಡೆದು, ತಕ್ಷಣವೇ ಭರ್ತಿ ಮಾಡಿ, ಸ್ಥಳದಲ್ಲಿಯೇ ಪ್ರವೇಶ ಶುಲ್ಕ ರೂ. 1500/- ಗಳನ್ನು ಪಾವತಿಸಿ, ರಶೀದಿ ಪಡೆದುಕೊಳ್ಳುವುದು. ಅರ್ಜಿ ಶುಲ್ಕ ರೂ. 10/- ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-256353 ಸಂಪರ್ಕಿಸುವಂತೆ ಆಡಳಿತಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬೆಂಗಳೂರು : ಖಾಸಗಿ ರೆಸಾರ್ಟ್ ನಲ್ಲಿ ‘ರೈನ್ ಡಾನ್ಸ್’ ಆಯೋಜನೆ : ಜಲಮಂಡಳಿ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ
BREAKING : ಮಂಡ್ಯದಲ್ಲಿ ‘ಪಟಾಕಿ’ ತುಂಬುವ ವೇಳೆ ಭೀಕರ ಸ್ಪೋಟ : ಓರ್ವ ಕಾರ್ಮಿಕ ದುರ್ಮರಣ