ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಕಾಡಾನೆ ದಾಳಿಯಿಂದ ಆಗಾಗ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ತೋಟದ ಮನೆಯಲ್ಲಿ ಟಿಂಬರ್ ಕಾರ್ಮಿಕರ ಮೇಲೆ ಕಾಡಾನೆ ಒಂದು ದಾಳಿ ನಡೆದಿದ್ದು, ಕಾರ್ಮಿಕನ ಮೇಲೆ ಕಾಲಿಟ್ಟು ಕಾಡಾನೆ ತುಳಿದು ಹೊಂದಿದೆ ಎಂದು ತುಳಿದುಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ವರ್ತೆಗುಂಡಿ ಬಳಿ ಟಿಂಬರ್ ಕಾರ್ಮಿಕ ಅಕ್ಬರ್ (35) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮದಲ್ಲಿ ಆನೆ ದಾಳಿಗೆ ಕಾರ್ಮಿಕ ಬಲಿಯಾಗಿದ್ದಾನೆ.
ತೋಟದಲ್ಲಿ ಆನೆ ಓಡಿಸುವಾಗ ಏಕಏಕಿ ನುಗ್ಗಿ ಬಂದಿದ್ದ ಕಾಡಾನೆ ಅಕ್ಬರ್ ಮೇಲೆ ದಾಳಿ ಮಾಡಿದೆ. ಈ ವೇಳೆ ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಆನೆ ಕಾಲಿಟ್ಟು ಕೊಂದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.