ಮಂಡ್ಯ : ಮಂಡ್ಯದಲ್ಲಿ ಭೀಕರ ಪಟಾಕಿ ದುರಂತ ಸಂಭವಿಸಿದ್ದು, ಪಟಾಕಿ ತುಂಬುವ ವೇಳೆ ಕಿಡಿ ತಾಗಿ ಭೀಕರ ಸ್ಫೋಟದಿಂದ ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ತಮಿಳುನಾಡು ಮೂಲದ ರಮೇಶ್ (67) ಎಂದು ತಿಳಿದು ಬಂದಿದೆ.ಮಂಡ್ಯ ತಾಲೂಕಿನ ಜಿ ಕೆಬ್ಬಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಕಾಲಭೈರವೇಶ್ವರ ಜಾತ್ರೆಗೆ ತಮಿಳುನಾಡು ಮೂಲದ ನನಾಲ್ವರು ಪಟಾಕಿ ಸಿಡಿಸಲು ಬಂದಿದ್ದರು ಎನ್ನಲಾಗುತ್ತಿದ್ದು, ನಿನ್ನೆ ರಾತ್ರಿ ಗ್ರಾಮದಲ್ಲಿ ಅದ್ದೂರಿಯಾಗಿ ಜಾತ್ರೆ ನಡೆದಿತ್ತು.
ಜಾತ್ರೆ ಮುಗಿಸಿ ಗ್ರಾಮದ ಆಲೆಮನೆಯಲ್ಲಿ ತಂಗಿದ್ದರು. ಇಂದು ಬೇರೊಂದು ಗ್ರಾಮಕ್ಕೆ ಪಟಾಕಿಯನ್ನು ತುಂಬುತ್ತಿದ್ದರು. ಪಟಾಕಿ ತುಂಬುವಾಗ ಕಿಡಿತಾಗಿ ಆಲೆಮನೆ ಹೊತ್ತಿ ಉರಿದಿದೆ. ಅಲೆಮನೆಯಲ್ಲಿ ಸ್ಪೋಟಗೊಂಡಿದೆ. ಪಟಾಕಿ ಸ್ಪೋಟದ ರಭಸಕ್ಕೆ ಆಲೆಮನೆ ಹೊತ್ತಿ ಉರಿದಿದೆ.ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯವರ ಬೆಂಕಿ ನಂದಿಸುತ್ತಿದ್ದಾರೆ. ಸ್ಥಳಕ್ಕೆ ಡಿಸಿ ಡಾ. ಕುಮಾರ್ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.