ಹುಬ್ಬಳ್ಳಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಕಣಕ್ಕೆ ಇಳಿಯುತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ವಿನೋದ್ ಅಸೂಟಿ ಸ್ಪರ್ಧೆ ಮಾಡಲಿದ್ದು, ನಮಗೆ ಜೋಶಿ ಟಾರ್ಗೆಟ್ ಅಲ್ಲ ಬಿಜೆಪಿ ಅಷ್ಟೇ ಟಾರ್ಗೆಟ್. ಈ ಬಾರಿ ವಿನೋದ ಅಸೂಟಿ ಗೆಲ್ಲುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.
‘ಉಡುಗೋರೆ’ಯಾಗಿ ಬಂದ ‘700 ಕೆಜಿ ಬೆಳ್ಳಿ’ಯ ವಸ್ತು ಮಲೆಮಹದೇಶ್ವರನಿಗೆ ನೀಡಿದ ‘ಸಿಎಂ ಸಿದ್ಧರಾಮಯ್ಯ’
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಈ ದೇಶ ಬಿಟ್ಟು ತೊಲಗಬೇಕು. ಪ್ರಹ್ಲಾದ ಜೋಶಿಗೆ ಏಕೆ 5 ಬಾರಿ ಧಾರವಾಡ ಟಿಕೆಟ್ ಕೊಟ್ರು? ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ಇದೆ. ಬಿಜೆಪಿಯವರು ಯಾಕೆ ಚುನಾವಣಾ ಬಾಂಡ್ ಬಗ್ಗೆ ಮಾತನಾಡುವುದಿಲ್ಲ? ಸಿಬಿಐ ದಾಳಿ ಮಾಡುವುದು ದುಡ್ಡು ಕೊಟ್ಟರೆ ಅವರನ್ನು ಬಿಡುವುದು ಎಂದು ವಾಗ್ದಾಳಿ ನಡೆಸಿದರು.
Watch Video : ಮಥುರಾ ಹೋಳಿ ಆಚರಣೆಯಲ್ಲಿ ‘ರಷ್ಯಾದ ಬಾರ್ ಗರ್ಲ್ಸ್’ ಅಶ್ಲೀಲ ನೃತ್ಯ, ವೀಡಿಯೋ ವೈರಲ್
ಮೋದಿ ವಿಶ್ವಗುರು ಆಗಿದ್ದರೆ ಟಿವಿಯಲ್ಲಿ ಯಾಕೆ ಕಾಣಿಸಿಕೊಳ್ಳುತ್ತಾರೆ? ನಮಗೆ ಜೋಶಿ ಟಾರ್ಗೆಟ್ ಅಲ್ಲ ಬಿಜೆಪಿ ಟಾರ್ಗೆಟ್. ಹತ್ತು ವರ್ಷದಲ್ಲಿ ಏನು ಕೆಲಸವಾಗಿದೆ ಎಂದು ಬಿಜೆಪಿಯವರಿಗೆ ಗೊತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷದ ವಾಗ್ದಾಳಿ ನಡೆಸಿದರು.
ಬೆಂಗಳೂರು : ಖಾಸಗಿ ರೆಸಾರ್ಟ್ ನಲ್ಲಿ ‘ರೈನ್ ಡಾನ್ಸ್’ ಆಯೋಜನೆ : ಜಲಮಂಡಳಿ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ
ನಾನು ಮೋದಿ ಹಾಗೂ ಜೋಶಿ ಬೈತಿಲ್ಲ ನೇರವಾಗಿ ಪ್ರಶ್ನೆ ಕೇಳಿದ್ದೇನೆ ಅಷ್ಟೇ. ಪುಲ್ವಾಮಾ ಅಟ್ಯಾಕ್ ಹೇಗಾಯಿತು, ಆರ್‌ಡಿಎಕ್ಸ್ ಹೇಗೆ ಬಂತು? ಈ ಬಗ್ಗೆ ಪ್ರಹ್ಲಾದ ಜೋಶಿ ಯಾಕೆ ಉತ್ತರ ಕೊಡುವುದಿಲ್ಲ. ಮುಸ್ಲಿಮರು ಅಂದರೆ ಎದೆ ಉಬ್ಬಿಸಿ ಬರುತ್ತಾರೆ ಹಿಂದುಗಳು ಸತ್ತೋದರೂ ಅದರ ಬಗ್ಗೆ ಯಾರು ಜವಾಬ್ದಾರಿ? ಈ ಬಾರಿ ಧಾರವಾಡ ಕ್ಷೇತ್ರದಲ್ಲಿ ವಿನೋದ್ ಅಸೂಟಿ ಗೆಲ್ಲುತ್ತಾರೆ ನಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.