ಬೆಂಗಳೂರು : ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ ಆದರೆ ಹೋಳಿ ಹಬ್ಬದ ಪ್ರಯುಕ್ತ ಇಲ್ಲಿ ಕುಣಿಯೋಕೆ ನೀರು ಪೋಲು ಮಾಡಲಾಗಿದೆ. ಹೌದು ಬೆಂಗಳೂರಿನ ವರ್ತೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಟ್ರೈನ್ ಡ್ಯಾನ್ಸ್ ಆಯೋಜನೆ ಮಾಡಲಾಗಿತ್ತು. ಇದೀಗ ಇವರ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
IPL 2024 match: ಇಂದು ಬೆಂಗಳೂರಿನ ‘ಚಿನ್ನಸ್ವಾಮಿ ಕ್ರೀಡಾಂಗಣ’ದೊಳಗೆ ಈ ಎಲ್ಲವು ಕೊಂಡೊಯ್ಯೋದಕ್ಕೆ ನಿಷೇಧ
ಬೆಂಗಳೂರಿನ ಜನತೆ ನೀರಿನ ತೊಂದರೆ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ, ಜಲಮಂಡಳಿ ಯಾವುದೇ ಕಾರಣಕ್ಕೂ ರೇನ್ ಡ್ಯಾನ್ಸ್ ಆಯೋಜನೆ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಆದರೆ ಆದೇಶಕ್ಕೆ ಡೋಂಟ್ ಕೇರ್ ಎಂದು ಸಿಟಿ ಮಂದಿ ವರ್ತಿಸಿದ್ದು ಡ್ಯಾನ್ಸ್ ಮಾಡಿದ್ದಾರೆ. ಕುಡಿಯುವ ನೀರಿಗೆ ಅಭಾವವಿದ್ದು, ರೈನ್ ಡ್ಯಾನ್ಸ್ ಆಯೋಜಿಸಿದಂತೆ ಜಲಮಂಡಳಿ ಈಗಾಗಲೇ ಸೂಚಿಸಿತ್ತು. ಆದರೂ ಜಲಮಂಡಳಿ ಆದೇಶವನ್ನು ಉಲ್ಲಂಘಿಸಿ ದೊಡ್ಡ ದೊಡ್ಡ ಮಂದಿ ಇದೀಗ ಹೋಳಿ ಹಬ್ಬದ ಪ್ರಯುಕ್ತ ಡ್ಯಾನ್ಸ್ ಮಾಡಿದ್ದಾರೆ.
ದೇಶದ ಜನತೆಗೆ ‘ಹೋಳಿ’ ಶುಭಾಶಯ ಕೋರಿದ ‘ಆಸ್ಟ್ರೇಲಿಯಾ ಪ್ರಧಾನಿ’ : ‘ಭಾರತೀಯರು ನನ್ನ ಕುಟುಂಬ’ ಎಂದ ‘ಇಸ್ರೇಲ್’
ಬೆಂಗಳೂರು ಅಷ್ಟೆ ಅಲ್ಲದೆ ಇತ್ತ ಬಾಗಲಕೋಟೆಯಲ್ಲೂ ಹೋಳಿ ಹಬ್ಬ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ನೀರನ್ನು ಪೋಲು ಮಾಡಲಾಗಿದೆ. ವಿದ್ಯಾಗಿರಿ ಸರ್ಕಲ್ ನಲ್ಲಿ ಯುವಜನತೆ ರೈನ್ ಡ್ಯಾನ್ಸ್ ಮಾಡಿದ್ದಾರೆ. ನೀರಿನ ಜೊತೆ ಹಾಗೂ ಡಿಜೆ ಸದ್ದಿಗೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದಾರೆ. ಈ ವೇಳೆ ಸಾಕಷ್ಟು ನೀರನ್ನು ಪೋಲು ಮಾಡಲಾಗಿದೆ.ನೀರಿನ ಅಭಾವ ಎಷ್ಟಿದೆ ಎಂದು ಕಿಂಚಿತ್ತು ಅರಿವಿಲ್ಲದೆ ಯುವಕ ಯುವತಿಯರು ಹೆಜ್ಜೆ ಹಾಕಿದ್ದಾರೆ.