ಚಿಕ್ಕಬಳ್ಳಾಪುರ : ರಾಜಕಾರಣದಲ್ಲಿ ಕೊಕ್ಕೆ ಅಥವಾ ವಕ್ರ ಆಗಿರುವ ಡಾ.ಕೆ. ಸುಧಾಕರ್ ಅವರನ್ನು ಪವಿತ್ರವಾದ ಪಾರ್ಲಿಮೆಂಟ್ ಮೆಟ್ಟಿಲು ಹತ್ತುವುದಕ್ಕೂ ಕೂಡ ಬಿಡುವುದಿಲ್ಲ. ಬೇಕಿದ್ದರೆ ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೊಳ್ಳಲಿ. ಸುಧಾಕರ್‌ಗೆ ಪಾರ್ಲಿಮೆಂಟ್ ಹೋಗಲು ಬಿಡುವುದಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
BREAKING : ಮಗು ದತ್ತು ಪಡೆದ ಪ್ರಕರಣ : ‘ರೀಲ್ಸ್ ರಾಣಿ’ ಸೋನುಗೌಡಗೆ ’14’ ದಿನ ನ್ಯಾಯಾಂಗ ಬಂಧನ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವೇ ಕೆಲವು ಬಿಜೆಪಿ ನಾಯಕರಿಗೆ ಸುಧಾಕರ್ ಸಹಾಯ ಮಾಡಿದ್ದಾರೆ. ಯಾವ ಥರದ ಸಹಾಯ ಅಂದ್ರೆ, ಸೂರ್ಯ ನಮಸ್ಕಾರ, ಕಪಾಲಿ ಭಾತ್, ಶವಾಸನ, ದೀರ್ಘ ದಂಡ ನಮಸ್ಕಾರ ಮಾಡಿಸಿದ್ದಾರೆ ಅನಿಸುತ್ತದೆ. ಇದೆಲ್ಲ ನಾಯಕರಿಗೆ ಮಾಡಿಸಿದ್ದಕ್ಕೆ ಬಹುಶಃ ಸುಧಾಕರ್ ಗೆ ಟಿಕೆಟ್ ಸಿಕ್ಕಿದೆ ಎಂದು ವಾಗ್ದಾಳಿ ನಡೆಸಿದರು.
ಅಫ್ಘಾನಿಸ್ತಾನಿಗಳ ವಾಪಸಾತಿಗೆ ಎರಡನೇ ಹಂತದ ಸಿದ್ಧತೆ ಆರಂಭಿಸಿದ ಪಾಕಿಸ್ತಾನ : ವರದಿ
ನಾನು ನನ್ನ ಎಲ್ಲ ಆದಾಯದ ದಾಖಲೆಗಳನ್ನು ಡಿಕ್ಲೇರ್ ಮಾಡುವುದಕ್ಕೆ ರೆಡಿ. ಸುಧಾಕರ್ ಪ್ರಾಮಾಣಿಕರಾಗಿದ್ರೆ ಅವರ ಆದಾಯದ ಮೂಲ ಬಿಡುಗಡೆ ಮಾಡುವುದಕ್ಕೆ ಸಿದ್ದ ಇದ್ದಾರಾ?ಕೋವಿಡ್‌ನಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ನಮ್ಮ ಸರ್ಕಾರ ಆರೋಪ ಮಾಡಿತ್ತು.
ಶೋಭಾ ಕರಂದ್ಲಾಜೆ ವಿರುದ್ಧ ‘ಬಹಿರಂಗ ಪ್ರಚಾರ-ಭಾಷಣಗಳಿಗೆ’ ನಿರ್ಭಂದಿಸುವಂತೆ ಚುನಾವಣಾ ಆಯೋಗಕ್ಕೆ ದೂರು
ಆದರೆ, ಬಿಜೆಪಿ ನಾಯಕರೇ ಆದ ಯತ್ನಾಳ್ ಅವರು ತಮ್ಮ ಪಕ್ಷದ ಸರ್ಕಾರದಲ್ಲಿ ಬರೋಬ್ಬರಿ 40,000 ಕೋಟಿ ರೂ. ಅವ್ಯವಹಾರ ನಡೆದಿದೆ ಎಮದು ಆರೋಪ ಮಾಡಿದರು. ಆದರೂ ಇವರಿಗೆ ಟಿಕೆಟ್ ಹೇಗೆ ಸಿಕ್ತು? ಎಂದು ಪ್ರಶ್ನೆ ಮಾಡಿದ್ದಾರೆ.