ಹುಬ್ಬಳ್ಳಿ : ಬೈಕ್ ಸವಾರನಿಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನಪ್ಪಿರುವ ಘಟನೆ ಹುಬ್ಬಳ್ಳಿ ಕಾರವಾರ್ ರಸ್ತೆಯ ಇಎಸ್ಐ ಆಸ್ಪತ್ರೆ ಮುಂಭಾಗ ಈ ಅಪಘಾತ ಸಂಭವಿಸಿದೆ.
ಹುಬ್ಬಳ್ಳಿಯ ಕಾರವಾರ ರಸ್ತೆಯ ಇ ಎಸ್ ಐ ಆಸ್ಪತ್ರೆ ಮುಂಭಾಗ ಘಟನೆ ನಡೆದಿದ್ದು, ಇದೀಗಹಳೆ ಹುಬ್ಬಳ್ಳಿ ಪೊಲೀಸರು ಮೃತ ಸವಾರನ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವಾಗಿದೆ.
ಬೈಕುಗಳ ನಡುವೆ ಅಪಘಾತ, ಇಬ್ಬರು ಸಾವು,
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ರೇವಡಿಕೋಪ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಾಪಟ್ಟಿದ್ದು, ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ.
ವೆಂಕನಗೌಡ ಪಾಟೀಲ್ (50) ಪ್ರಮೋದ್ ಕುಮಾರ್ (18) ಎನ್ನುವವರು ಮೃತಾಪಟ್ಟಿದ್ದಾರೆ. ಮತ್ತೆ ಇಬ್ಬರ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಅಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಪ್ರಕರಣ ದಾಖಲಾಗಿದೆ.