ನವದೆಹಲಿ : ಮೆಟ್ರೋಗಳಲ್ಲಿ ಇತ್ತೀಚಿಗೆ ರೀಲ್ಸ್ ಮಾಡುವುದು ಒಂದು ಶೋಕಿ ಆಗಿಬಿಟ್ಟಿದೆ. ಅಲ್ಲದೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸಿದ್ದು ಹೋಳಿ ಹಬ್ಬ ಹಿನ್ನೆಲೆಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಅಸಭ್ಯವಾಗಿ ವರ್ತಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕೇವಲ ಎರಡು ಎಸೆತಗಳ ನಂತ್ರ ‘RR vs LSG’ ಪಂದ್ಯ ಕ್ಷಣಕಾಲ ನಿಲುಗಡೆ: ಕಾರಣ ಏನು ಗೊತ್ತಾ?
ಇಬ್ಬರು ಹುಡುಗಿಯರು ನೆಲದ ಮೇಲೆ ಕುಳಿತಿರುವುದು ಮತ್ತು ನೆಲದ ಮೇಲೆ ಬಣ್ಣ ಹರಡಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇದರ ನಂತರ, ಅಂಗ್ ಲಗಾ ದೇ ರೆ… ಸಾಂಗ್ ಪ್ಲೇ ಆದ ತಕ್ಷಣ, ಇಬ್ಬರೂ ಅಸಭ್ಯ ರೀತಿಯಲ್ಲಿ ಪರಸ್ಪರ ಬಣ್ಣಗಳನ್ನು ಹಚ್ಚಲು ಪ್ರಾರಂಭಿಸುತ್ತಾರೆ.
ಐಟಿ, ಇಡಿ, ಸಿಬಿಐ ದಾಳಿಗೆ ಹೆದರಿ ಬಿಜೆಪಿ ಸೇರ್ತಿದ್ದಾರೆ : ‘NCP’ ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ
ಇದೀಗ ಈ ವಿಡಿಯೋವನ್ನು ಪ್ರತಿಯೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದು ಇದಕ್ಕೆ ಹಲವಾರು ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಕಾನೂನಿನ ಅಗತ್ಯವಿಲ್ಲ. 15 ಸೆಕೆಂಡ್ಗೆ 1 ಲಕ್ಷ ರೂಪಾಯಿ ಶುಲ್ಕ ವಿಧಿಸಿದರೆ ಸಾಕು ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, ಅಂತಹವರನ್ನು ಮೆಟ್ರೋದಲ್ಲಿ ನಿಷೇಧಿಸಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
We need a law against this asap pic.twitter.com/3qH1aom1Ml
— Madhur Singh (@ThePlacardGuy) March 23, 2024