ಶಿವಮೊಗ್ಗ : ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ‘ಗೀತಾ ಶಿವ ರಾಜಕುಮಾರ್ ಡಮ್ಮಿ ಕ್ಯಾಂಡಿಡೇಟ್’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋಕೆ ಹೇಳಿ. ಈಶ್ವರಪ್ಪ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈವರೆಗೆ 15.78 ಕೋಟಿ ನಗದು, 23.37 ಲಕ್ಷ ಮೌಲ್ಯದ ಮದ್ಯ ವಶ
ಮಾಜಿ ಸಿಎಂ ಯಡಿಯೂರಪ್ಪನವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಯಡಿಯೂರಪ್ಪ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ. ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಕೊಳೆತು ನಾರ್ತಿದೆ. ಈಶ್ವರಪ್ಪ ಅವರಿಗೆ ಪೊಲಿಟಿಕಲ್ ಸುಪಾರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿದರು.
ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯನ್ನು ಜನರೇಕೆ ನಂಬುತ್ತಾರೆ? – ಸಿದ್ಧರಾಮಯ್ಯ ಪ್ರಶ್ನೆ
ಈಶ್ವರಪ್ಪ ಅವರನ್ನು ಹಿಂದುಳಿದ ವರ್ಗದ ಮತ ಹೊಡಿ ಅಂತಾ ಕಳುಹಿಸಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ. ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಗಂಡಸುತನ ಇದ್ದರೆ ಅದರ ಬಗ್ಗೆ ಮಾತನಾಡಲಿ. ನಮ್ಮ ಅಕ್ಕ (ಗೀತಾ ಶಿವರಾಜ್ ಕುಮಾರ್) ಒಳ್ಳೆಯ ರೀತಿ ಪ್ರಚಾರ ಮಾಡ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ. ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ ಇವರು ಕ್ಯಾಂಡಿಡೇಟಾ ಅಥವಾ ಡಮ್ಮಿ ಕ್ಯಾಂಡಿಡೇಟಾ ಎಂದು ತಿರುಗೇಟು ನೀಡಿದರು.