ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆ ಸಲುವಾಗಿ ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಚೆನ್ನೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ಮರಳಿದ ಮಾಜಿ ಮುಖ್ಯಮಂತ್ರಿಗಳಾದ H.D.ಕುಮಾರಸ್ವಾಮಿ ಅವರು; ತಮಗೆ ಶುಭ ಕೋರಲು ಬಂದ ಮಂಡ್ಯ ಮತ್ತಿತರೆ ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ತಮ್ಮ ನಿವಾಸದಲ್ಲಿ ಮಾತನಾಡಿದರು.
ಹೆಚ್ಚು ಮಾತನಾಡಬಾರದು, ಆಯಾಸ ಮಾಡಿಕೊಳ್ಳಬಾರದು ಎಂದು ವೈದ್ಯರು ನೀಡಿರುವ ಕಟ್ಟುನಿಟ್ಟಿನ ಸೂಚನೆಯಂತೆ ಮಾಜಿ ಮುಖ್ಯಮಂತ್ರಿಗಳು ತಮ್ಮ ಮನೆಯ ಮೊದಲ ಮಹಡಿಯಲ್ಲೇ ನಿಂತು ಸ್ವಲ್ಪ ಸಮಯವಷ್ಟೇ ಮಾತನಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನನ್ನು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ನಾನೂ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ನನಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಇದೀಗ 25 ಲಕ್ಷ ರೂ ಮೌಲ್ಯದ ಸ್ಟಂಚ್ ಅಳವಡಿಸಿದ್ದಾರೆ. ನಮ್ಮ ಪಕ್ಷದಿಂದ ಬೆಳೆದವರೇ ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಹೇಳುವ ಮೂಲಕ ಗಳಗಳ ಅಂತ ಕಣ್ಣೀರಿಟ್ಟು ಭಾವುಕರಾಗಿ ನುಡಿದರು.
ನಮ್ಮ ಪಕ್ಷದಿಂದ ಬೆಳೆದವರೇ ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಮಾಜಿ ಸಿಎಂ HDK ಕಣ್ಣೀರು
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ನವೋದಯ ವಿದ್ಯಾಲಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ