ಶಿವಮೊಗ್ಗ : ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇದೀಗ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಪರವಾಗಿ ನಟ ಶಿವರಾಜ್ ಕುಮಾರ್ ಎಂದು ಚುನಾವಣಾ ಪ್ರಚಾರ ನಡೆಸಿದರು ಈ ವೇಳೆ ಜೋಗಯ್ಯ ಸಿನಿಮಾದ ಡೈಲಾಗ್ ಹೇಳಿದ್ದು ಕಾರ್ಯಕರ್ತರಲ್ಲಿ ಹುಮ್ಮಸ್ಸು ನೀಡಿತು.
ನಮ್ಮ ಪಕ್ಷದಿಂದ ಬೆಳೆದವರೇ ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ: ಮಾಜಿ ಸಿಎಂ HDK ಕಣ್ಣೀರು
ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದ ವೇಳೆ ಸಭೆ ಒಂದರಲ್ಲಿ ನಟ ಶಿವರಾಜ್ ಕುಮಾರ್ ಅವರು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದಿದ್ದು, ‘ಯೋ ಬರ್ಕೊಳಯ್ಯ ಮುಂದುಗಡೆ ಪೇಪರಲ್ಲಿ ಬರ್ಕೋ ಶಿವಮೊಗ್ಗ ನಂದು’ ಎಂದು ಜೋಗಯ್ಯ ಸಿನಿಮಾದ ಡೈಲಾಗ್ ಹೊಡೆದು ನೆರೆದಿರುವ ಕಾರ್ಯಕರ್ತರನ್ನು ರಂಜಿಸಿದರು.
ಯದುವೀರ್ ಬಗ್ಗೆ ಎಚ್ಚರವಿರಲಿ, ಬಿಜೆಪಿಗರು ‘EMOTIONAL’ ವಿಚಾರ ತಿರುಗಿಸುವಲ್ಲಿ ‘ನಿಸ್ಸೀಮರು’ : ಸಿಎಂ ಕಿವಿಮಾತು
ಈ ವೇಳೆ ಗೀತಾ ಪರ ಪ್ರಚಾರದ ವೇಳೆ ಶಿವಣ್ಣ ಹೇಳಿಕೆ ನೀಡಿದ್ದು, ಗೀತಾ ಅವರಲ್ಲಿ ರಕ್ತದಲ್ಲಿ ರಾಜಕೀಯ ಇದೆ. ಆದರೆ ನನಗೆ ಇಲ್ಲ ಬಂಗಾರಪ್ಪ ಅವರ ಮಗಳನ್ನು ಮದುವೆ ಆಗಿದ್ದೇನೆ ನಿಮ್ಮ ಮನೆ ಮಗಳಿಗೆ ಒಂದು ಉಡುಗೊರೆ ನೀಡಿ ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡುತ್ತಾರೆ ನನಗಿಂತ ಮೊದಲು ಶಿವಮೊಗ್ಗ ಜಿಲ್ಲೆಯ ಮಗಳು ಎಂದು ಮತದಾರರಲ್ಲಿ ಶಿವಣ್ಣ ಮನವಿ ಮಾಡಿದರು.