ಬಾಗಲಕೋಟೆ : ಲೋಕಸಭೆ ಚುನಾವಣೆಗೆ ಬಾಗಲಕೋಟೆ ಟಿಕೆಟ್ ವಂಚಿತರಾಗಿರುವ ವೀಣಾ ಕಾಶಪ್ಪನವರ ಅತಿ ಶಾಸಕ ವಿಜಯಾನಂದ ಕಾಶಪ್ಪನವರ್ ಪರೋಕ್ಷವಾಗಿ ಸಚಿವ ಶಿವಾನಂದ್ ಪಾಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ನಮ್ಮ ಕಾರ್ಯಕರ್ತರಿಗೆ ಸಭೆಗೆ ಹೋಗಬೇಡಿ ಎಂದು ಧಮ್ಕಿ ಹಾಕಿದ್ದಾರೆ.ತುಮ್ಹಾರೇ ಧಮ್ಕಿ ನಹೀ ಚಲೇಗಾ ಬಚ್ಚಾ ಎಂದ ಶಿವಾನಂದ ಪಾಟೀಲ್ಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ‘ಭ್ರೂಣ ಹತ್ಯೆ’ ಪ್ರಕರಣದ ತನಿಖೆಗೆ ‘ತನಿಖಾ ತಂಡ’ ರಚಿಸಿ ಆದೇಶ
ಬಾಗಲಕೋಟೆ ನಗರದಲ್ಲಿ ನಡೆದ ವೀಣಾ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ವಿಜಯಾನಂದ, ಪಕ್ಷಕ್ಕೆ ಬೆಲೆ ಕೊಡ್ತೀನಿ, ರುಂಡ ಬೇಕಾದ್ರೂ ಕೊಡುತ್ತೇನೆ. ವೈಯಕ್ತಿಕವಾಗಿ ಬಂದರೆ ಯಾವ ಮಗನಿಗೂ ನಾನು ಬಗ್ಗುವುದಿಲ್ಲ.ಪ್ರಸಂಗ ಬಂದರೆ ರಾಜಕೀಯದಲ್ಲಿ ಯಾರು ಏನಾಗುತ್ತಾರೆ, ಯಾರಿಗೆ ಗೊತ್ತಿದೆ. 50 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರಿಗೆ ತಾಕತ್ ಪ್ರಶ್ನೆ ಮಾಡ್ತೀರಿ. ಬನ್ನಿ ನನ್ನ ಮಕ್ಕಳ ನಮ್ಮ ತಾಕತ್ತು ತೋರಿಸ್ತೀನಿ ಎಂದು ವಾಗ್ದಾಳಿ ನಡೆಸಿದರು.
‘IPL’ ವೀಕ್ಷಕರಿಗೆ ಗುಡ್ ನ್ಯೂಸ್ : ನಮ್ಮ ಮೆಟ್ರೋ ಸೇವಾ ಅವಧಿಯನ್ನು ವಿಸ್ತರಿಸಿದ ‘BMRCL’
ಜಾತ್ಯಾತೀತ ನಿಲುವಿನ ಮೇಲೆ ನಿಂತಿರುವ ಪಕ್ಷ ಕಾಂಗ್ರೆಸ್. ಇವತ್ತು ನಮಗೆ ನಿಮಗೆ ಎಲ್ಲರಿಗೂ ನೋವಾಗಿದೆ. ಈ ವೇದಿಕೆ ಕಾಂಗ್ರೆಸ್ ಪಕ್ಷ ಹಾಗೂ ಯಾರ ವಿರುದ್ದ ಅಲ್ಲ. ನಮಗೆ ಬೆಂಬಲವಾಗಿ ಗಟ್ಟಿಯಾಗಿ ನಿಂತ ನಿಮ್ಮೆಲ್ಲರ ಪಾದಕ್ಕೆ ನನ್ನ ನಮನಗಳು. ನಮ್ಮ ಜಿಲ್ಲೆಯಲ್ಲಿ ಬಹಳ ಜನ ಆಕಾಂಕ್ಷಿಳಿದ್ದೆವು. ಈ ಜಿಲ್ಲೆಯಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ. ಐದು ಜನ ಕಾಂಗ್ರೆಸ್ ಶಾಸಕರಲ್ಲಿ ನಮ್ಮನ್ನು ಹಿರಿಯರು ಮರೆತಿದ್ದಾರೆ ಅನಿಸುತ್ತಿದೆ ಎಂದರು.
BREAKING: ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸಗೌಡಗೆ 4 ದಿನ ಪೊಲೀಸ್ ಕಷ್ಟಡಿಗೆ
ನನ್ನ ಅಭಿಪ್ರಾಯ ಕೂಡ ಅಷ್ಟೇ ಮುಖ್ಯವಾಗಿದೆ. ಕೇವಲ ನನ್ನ ಪತ್ನಿ, ಕಾಶಪ್ಪನವರ ಕುಟುಂಬದ ಸೊಸೆ ಅಂತ ಅವರ ಹೆಸರು ಹೇಳೋದಲ್ಲ. ಯಾರು ಪಕ್ಷಕ್ಕಾಗಿ ತನು, ಮನ, ಧನದಿಂದ ದುಡಿತಾರೆ ಅವರಿಗೆ ಅವಕಾಶ ಕೊಡಬೇಕು. ಇಲ್ಲಿ ಕುಟುಂಬ ರಾಜಕಾರಣ ಮಾಡಲು ಬಂದಿಲ್ಲ ಎಂದು ಹೇಳಿದ್ದಾರೆ.