ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮುಕೇಶ್ ಎಂಬ ಯುವಕನ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಜನ ಪ್ರಾತಿನಿಧ್ಯ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣಕ್ಕೆ ಹೈ ಕೋರ್ಟ್ ತಡೆ ನೀಡಿದೆ.
ಚುನಾವಣೆಗೆ ಸಂಬಂಧಿಸಿದ ಯಾವುದೇ ಹೇಳಿಕೆ ನೀಡಿಲ್ಲ. ಆದರೂ ಕೆಸು ದಾಖಲಿಸಿದ್ದಾರೆಂದು ವಕೀಲ ವೆಂಕಟೇಶ ದಳವಾಯಿ ವಾದ ಮಂಡಿಸಿದರು.ಕಾನೂನು ಬಾಹಿರ ಕೇಸ್ ದಾಖಲಿಸಲು ಇದು ನಾಜಿ ಯುಗವಲ್ಲ. ಸಂವಿಧಾನದ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಎಲ್ಲಾ ಪಕ್ಷಗಳು ರಾಜಕಾರಣಿಗಳು ಸಂಯಮ ವಹಿಸಬೇಕು.ನಾವು ನಾಗರಿಕ ಸಮಾಜದಲ್ಲಿದ್ದೇವೆ ಹೊರತು ಅಪಘಾನಿಸ್ತಾನದಲ್ಲಲ್ಲ ನ್ಯಾ.ಕೃಷ್ಣ ಎಸ್ ದೀಕ್ಷಿತರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು.
ಇತ್ತೀಚಿಗೆ ಬೆಂಗಳೂರಿನ ನಗರ್ತ ಪೇಟೆಯಲ್ಲಿ ಮುಕೇಶ್ ಎಂಬ ಯುವಕನ ಮೇಲೆ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಚುನಾವಣೆ ನೀತಿ ಸಂಹಿತೆಯಿಂದಾಗಿ, ಪ್ರತಿಭಟನೆಗೆ ಅವಕಾಶ ಇಲ್ಲ. ಹೀಗಾಗಿ ಮುಖೇಶ್ ಸೇರಿದಂತೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದ್ದರು. ಇದೇ ವೇಳೆ ಸ್ಥಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಹ ಆಗಮಿಸಿದ್ರು.
ಈ ವೇಳೆ ಸೇರಿದ ಜನರ ಘೋಷಣೆ, ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪಕ್ಕೆ ತಿರುಗಿತ್ತು. ಈ ವೇಳೆ ಕಾಂಗ್ರೆಸ್ ವಿರುದ್ಧ ಗುಡುಗುತ್ತಾ ಯಾರೋ ತಮಿಳುನಾಡಿನಿಂದ ಬರ್ತಾರೆ ನಮ್ಮ ಕೆಫೆಯಲ್ಲಿ ಬಾಂಬ್ ಇಡ್ತಾರೆ ಅಂತ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಇದೇ ಮಾತು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.ಶೋಭಾ ಕರಂದ್ಲಾಜೆ ಅಂಡ್ ಟೀಂ ಅನ್ನ ಪೊಲೀಸರು ವಶಕ್ಕೆ ಪಡೀತಿದ್ದಂತೆ, ಸಂಸದ ತೇಜಸ್ವಿ ಸೂರ್ಯ ಸಹ ಸ್ಥಳಕ್ಕೆ ಆಗಮಿಸಿದ್ರು. ಆಗಲೂ ಹೈಡ್ರಾಮಾ ನಡೀದಿತ್ತು. ಇದೀಗ ಶೋಭ ಕರಂದ್ರಿ ಗುರು ದಾಖಲಾಗಿದ್ದ FIR ಗೆ ಹೈಕೋರ್ಟ್ ತಡೆ ನೀಡಿದೆ.