ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಪಿಸ್ತೂಲ್ ಪರಿಶೀಲನೆ ವೇಳೆಯಲ್ಲಿ ಮಿಸ್ ಫೈರಿಂಗ್ ಉಂಟಾಗಿ, ಠಾಣೆಯ ರೈಟರ್ ಕಾಲಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಇಂದು ಎಸ್ ಬಿ ಕಾನ್ಸ್ ಟೇಬಲ್ ವೆಂಕಣ್ಣ ಎಂಬುವರು ಪಿಸ್ತೂಲ್ ಪರಿಶೀಲನೆ ವೇಳೆಯಲ್ಲಿ ಟ್ರಿಗರ್ ಪ್ರೆಸ್ ಮಾಡಿದ್ದರಿಂದ ಮಿಸ್ ಫೈರಿಂಗ್ ಉಂಟಾಗಿದೆ.
ಪಿಸ್ತೂಲ್ ನಿಂದ ಹಾರಿದಂತ ಗುಂಡು, ಬೇಗೂರು ಪೊಲೀಸ್ ಠಾಣೆಯ ರೈಟರ್ ಅಂಬುದಾಸ್ ಎಂಬುವರ ಎಡಗಾಲಿಗೆ ಬಿದ್ದಿದ್ದು, ಅವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.
ಮಿಸ್ ಫೈರಿಂಗ್ ನಿಂದ ಗಾಯಗೊಂಡಿರುವಂತ ರೈಟರ್ ಅಂಬುದಾಸ್ ಅವರನ್ನು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ – ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ
ಮಧ್ಯಪ್ರದೇಶ : ವಿವಾದಿತ ‘ಭೋಜಶಾಲ-ಕಮಲ್ ಮೌಲಾ’ ಮಸೀದಿ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ