ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಪಿಎಂ ಎಂದು ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಹೌದು, ಅದು ದಲಿತರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಮುಗಿಸುವುದರಲ್ಲಿ ಎಂದು ನಾರಾಯಣಸ್ವಾಮಿ ಟೀಕಿಸಿದ್ದಾರೆ.
BREAKING: ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ: ತಮಿಳು ನಟ ಶರತ್ ಕುಮಾರ್ ಪತ್ನಿ ರಾಧಿಕಾಗೆ ಟಿಕೆಟ್
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಾನೇ ಸ್ಟ್ರಾಂಗ್ ಎಂದುಕೊಂಡು ಓಡಾಡುತ್ತಿದ್ದಾರೆ ಸ್ಟ್ರಾಂಗ್ ಸಿಎಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು? ಎಂದು ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.
ನಟ ಶಿವರಾಜ್ ಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು: ಚಲನಚಿತ್ರ, ಜಾಹೀರಾತು ತಡೆಗೆ ಮನವಿ
ದಲಿತರನ್ನಮುಗಿಸುವುದರಲ್ಲಿ ಸಿಎಂ ಸಿದ್ದರಾಮಯ್ಯ ಬಹಳಷ್ಟು ಸ್ಟ್ರಾಂಗ್ ಇರಬಹುದು ಕಾಂಗ್ರೆಸ್ ಪಕ್ಷ ಮುಳುಗಿಸುವುದರಲ್ಲಿ ಬಹಳ ಸ್ಟ್ರಾಂಗ್ ಇದ್ದಾರೆ. ಸಿದ್ದರಾಮಯ್ಯನವರು ಮೋದಿ ಕಾಲಿನ ಧೂಳಿಗೂ ಸಮವಲ್ಲ. ಮೇಕೆದಾಟು ವಿರೋಧ ಮಾಡುವ ಡಿಎಂಕೆ ವಿರುದ್ಧ ಯಾವಾಗ ಪಾದಯಾತ್ರೆ ಮಾಡುತ್ತೀರಿ ಎಂದು ಬೆಂಗಳೂರಿನಲ್ಲಿ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶ : ವಿವಾದಿತ ‘ಭೋಜಶಾಲ-ಕಮಲ್ ಮೌಲಾ’ ಮಸೀದಿ ಸಂಕೀರ್ಣದಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ
ಸಚಿವ ಪ್ರಿಯಾಂಕ್ ಖರ್ಗೆ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಬೀದಿ ಬಸವ ಇದ್ದ ಹಾಗೆ. ಎಲ್ಲಾದರೂ ಸಿಕ್ಕ ಸಿಕ್ಕ ಕಡೆ ಮೇಯ್ದುಕೊಂಡು ಬರಬಹುದು. ಗೃಹ ಸಚಿವರು ಮಾತನಾಡುವ ಮೊದಲೇ ಖರ್ಗೆ ತಾವೇ ಮಾತನಾಡುತ್ತಾರೆ. ಮೋದಿ ಅವರನ್ನು ಪ್ರಿಯಾಂಕ್ ಖರ್ಗೆ ಚೋರ್ ಗುರು ಎನ್ನುತ್ತಾರೆ. ನಿಜವಾದ ಚೋರ್ ಗುರು ಸಿದ್ದರಾಮಯ್ಯ ಎಂದು ಅವರು ಕಿಡಿ ಕಾರಿದರು.