ನವದೆಹಲಿ : ಅಬಕಾರಿ ನೀತಿ ಹಗರಣಕ್ಕೆ ಸಂಬಂಧ ಪಟ್ಟಂತೆ ನಿನ್ನೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಕುರಿತು ಕುರಿತು ಅಣ್ಣ ಹಾಜಾರೆ ಮಾತನಾಡಿದ್ದು, ಅರವಿಂದ್ ನನ್ನ ಮಾತನ್ನು ಕೇಳಲೇ ಇಲ್ಲ ಎಂದು ತಿಳಿಸಿದರು.
ಒಂದು ಕಾಲದಲ್ಲಿ ನಾವು ಮಧ್ಯದ ವಿರುದ್ಧ ಒಟ್ಟಾಗಿ ನಿಂತುಕೊಂಡಿದ್ವಿ. ಈಗ ಅಬಕಾರಿ ನೀತಿ ಕುರಿತು ಅವರು ವಿರೋಧ ತಾಳಿದ್ದಾರೆ. ಈ ವಿರೋಧ ನೀತಿಯಿಂದಾಗಿ ಅವರು ಇದೀಗ ಅರೆಸ್ಟ್ ಆಗಿದ್ದಾರೆ. ಅರವಿಂದ ಕೇಜ್ರಿವಾಲ್ ಯಾವತ್ತೂ ನನ್ನ ಮಾತು ಕೇಳಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಶುಕ್ರವಾರ (ಮಾರ್ಚ್ 22) ಅರವಿಂದ್ ಕೇಜ್ರಿವಾಲ್ “ಮದ್ಯ ನೀತಿಗಳನ್ನು” ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ದೆಹಲಿ ಮುಖ್ಯಮಂತ್ರಿಯ ಬಂಧನ ಅವರ ಸ್ವಂತ ಕಾರ್ಯಗಳಿಂದಾಗಿ ಎಂದು ಹೇಳಿದರು.
ನನ್ನ ಜೊತೆ ಕೆಲಸ ಮಾಡುತ್ತಿದ್ದ, ಮದ್ಯದ ವಿರುದ್ಧ ಧ್ವನಿ ಎತ್ತುತ್ತಿದ್ದ ಅರವಿಂದ್ ಕೇಜ್ರಿವಾಲ್ ಈಗ ಮದ್ಯದ ನೀತಿಗಳನ್ನು ಮಾಡುತ್ತಿರುವುದಕ್ಕೆ ನನಗೆ ತುಂಬಾ ಬೇಸರವಾಗಿದೆ.ಆತನ ಕೃತ್ಯದಿಂದಲೇ ಬಂಧನವಾಗಿದೆ.ಆದರೆ ಅವರು ಏನು ಮಾಡುತ್ತಾರೆ?ಅಧಿಕಾರದ ಮುಂದೆ ಏನೂ ಕೆಲಸ ಮಾಡುವುದಿಲ್ಲ. ಇದೀಗ ಅವರ ಬಂಧನವಾಗಿದೆ, ಈಗ ಕಾನೂನಿನ ಪ್ರಕಾರ ಏನಾಗಬೇಕೋ ಅದು ನಡೆಯುತ್ತದೆ ಎಂದು ಅಣ್ಣಾ ಹಜಾರೆ ಹೇಳಿದರು.