ರಾಯಚೂರು : ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಪತ್ನಿ ಒಬ್ಬಳು ತನ್ನ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಸಿಂಗನೊಡಿ ತಂಡದಲ್ಲಿ ನಡೆದಿದೆ.
ಪೇಟಿಎಂ ಮಾಜಿ ಉದ್ಯೋಗಿಯಿಂದ 22 ಸ್ಟಾರ್ಟ್ ಅಪ್ ಕಂಪನಿ ಒಡೆಯ: 10,000 ಕೋಟಿ ವಹಿವಾಟು -ವರದಿ
ಹೌದು ಸಿಂಗನೋಡಿ ಗ್ರಾಮದ ನಿವಾಸಿ, ಗ್ರಾಪಂ ಸದಸ್ಯ ರಾಜು ನಾಯ್ಕ್ (35) ಕೊಲೆಯಾದ ಪತಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಇನ್ನೂ ಪ್ರಿಯಕರನ ಜೊತೆ ಸೇರಿದ ಪತ್ನಿ ಸ್ನೇಹ ಕೃತ್ಯವೆಸಗಿದ ಆರೋಪಿಯಾಗಿದ್ದಾಳೆ.ಅಕ್ರಮ ಸಂಬಂಧ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.
ಪೇಟಿಎಂ ಮಾಜಿ ಉದ್ಯೋಗಿಯಿಂದ 22 ಸ್ಟಾರ್ಟ್ ಅಪ್ ಕಂಪನಿ ಒಡೆಯ: 10,000 ಕೋಟಿ ವಹಿವಾಟು -ವರದಿ
ಅಲ್ಲದೆ ಕಳೆದ ಎರಡು ವರ್ಷಗಳ ಹಿಂದಿನಿಂದ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಸ್ನೇಹ ಜೊತೆಗೆ ಪತಿ ರಾಜು ನಾಯ್ಕ್ ಜಗಳವಾಡುತ್ತಿದ್ದನು ಎಂದು ಹೇಳಲಾಗುತ್ತಿದ್ದು, ಇದೇ ಸಿಟ್ಟಿನಿಂದ ಪತಿಗೆ ಕುಡಿಯುವ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ನಂತರ ಕತ್ತು ಹಸುಕಿ ಕೊಲೆ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದು ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸ್ನೇಹಾಳನ್ನು ಬಂಧಿಸಿರುವ ಪೊಲೀಸರು ಆಕೆಯ ಪ್ರಿಯಕರನ ಶೋಧ ಕಾರ್ಯ ಮುಂದುವರಿಸಿದ್ದಾರೆ.