ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೂವರು ನಾಯಕರು ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು ಈ ವೇಳೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಬಿಜೆಪಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.ಚುನಾವಣಾ ಆಯೋಗ ಇಡಿ ಸಿಬಿಐ ಐಟಿ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಚುನಾವಣಾ ಬಾಂಡ್ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಸ್ಪಕ್ಷಪಾತ ಚುನಾವಣೆ ಅನಿವಾರ್ಯ.ನಮ್ಮ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ನವಹಲಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು.
ಫೈವ್ ಸ್ಟಾರ್ ಹೋಟೆಲ್ ಗಳಿಗೆ ಹೋಗುತ್ತಾರೆ ನಾಲ್ಕೈದು ವಿಮಾನಗಳಲ್ಲಿ ಮೀಟಿಂಗ್ ಗೆ ತೆರಳುತ್ತಾರೆ ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆ ನಡೆಸಿತ್ತಿದೆ. ಆದಷ್ಟು ಬೇಗ ಸತ್ಯ ನಮ್ಮ ಕಣ್ಣ ಮುಂದೆ ಬರಲಿದೆ. ಸಂವಿಧಾನಿಕ ಸಂಸ್ಥೆಗಳಿಗೆ ನಾನು ಮನವಿ ಮಾಡುತ್ತೇನೆ.. ನಮ್ಮ ಅಕೌಂಟ್ ಗಳನ್ನು ಆದಷ್ಟು ಬೇಗ ರಿಲೀಸ್ ಮಾಡಿ. ಯಾವುದೇ ಪಕ್ಷ ಆದಾಯ ತೆರಿಗೆ ನೀಡುವುದಿಲ್ಲ.
ಈ ಬಾರಿ ಚುನಾವಣೆಯಲ್ಲಿ ನಮ್ಮನ್ನು ತುದಿಯಲಾಗುತ್ತಿದೆ ಹಣ ಬಳಸಿಕೊಂಡು ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ ಆದರೆ ದೇಶದ ಜನರು ಜಾಗೃತರಾಗಿದ್ದಾರೆ. ನಮ್ಮ ಪಕ್ಷದ ಹಣವನ್ನು ರಿಲೀಸ್ ಮಾಡಬೇಕು. ಬಿಜೆಪಿ ಕೂಡ ಆದಾಯ ತೆರಿಗೆ ನೀಡುವುದಿಲ್ಲ ಆದರೆ ಕಾಂಗ್ರೆಸ್ಗೆ ಮಾತ್ರ ನಿರ್ಬಂಧ ಯಾಕೆ ನಾವು ಕೋಡ್ ನ ಅಂತಿಮ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಚುನಾವಣಾ ಬಾಂಡ್ ಯಿಂದ ಬಿಜೆಪಿ ಖಜಾನೆ ತುಂಬಿದೆ ನಮ್ಮ ಬ್ಯಾಂಕ್ ಖಾತೆಯ ಫ್ರಿಜ್ ಗಳನ್ನು ಸೀಜ್ ಮಾಡಲಾಗಿದೆ ವಿರೋಧ ಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಹೀಗಾದರೆ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯಲು ಸಾಧ್ಯವೇ? ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಗಳು ಅಕ್ರಮ ಎಂದು ಅಭಿಪ್ರಾಯ ಪಟ್ಟಿದೆ ಎಂದರು.
ಪ್ರಧಾನಿ ಮೋದಿಯಿಂದ ಕಾಂಗ್ರೆಸ್ ವಿರುದ್ಧ ಷಡ್ಯಂತರ ನಡೆಯುತ್ತಿದೆ ನಮ್ಮ ಹಣವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗುತ್ತದೆ ಆದರೆ ನಮ್ಮ ಅಕೌಂಟ್ ಗಳನ್ನು ಸೀಜ್ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.